Crime 
ಉಡುಪಿ

ವಾಹನಗಳಲ್ಲಿ ಹಿಂಬಾಲಿಸಿ ಹಲ್ಲೆ

ಇಂದಿರಾ ಎನ್ ಕೆ

ಕಾಸರಗೋಡು: ವಾಹನಗಳಲ್ಲಿ ಹಿಂಬಾಲಿಸಿ ಬಂದು ಹಲ್ಲೆ ನಡೆಸಿದ ಪರಿಣಾಮ ಬದಿಯಡ್ಕ ವಳಮಲೆ ನಿವಾಸಿ ಧ್ವನೀಶ್ ಶೆಟ್ಟಿ ಸಿ.ಆರ್. (18) ಮತ್ತು ಸ್ನೇಹಿತ ಬದಿಯಡ್ಕ ಯಶ್ವಂತ್(19)ಗಾಯಗೊಂಡಿದ್ದಾರೆ.

ಧ್ವನೀಶ್ ನೀಡಿದ ದೂರಿನನ್ವಯ ಶುಹೈಬ್(26), ಬದಿಯಡ್ಕದ ಹಸನ್ ಶಹಲ್(18) ಒಳಗೊಂಡಂತೆ ಐದು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬದಿಯಡ್ಕದಿಂದ ಸ್ನೇಹಿತ ಯಶ್ವಂತ್ ಜತೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಬದಿಯಡ್ಕ ಸರ್ಕಲ್ ಬಳಿ ಸುಮಾರು 25 ಮಂದಿಯ ತಂಡವೊಂದು ಜಗಳಕ್ಕೆ ಮುಂದಾದರು.

ಯಾವುದೇ ಪ್ರತಿಕ್ರಿಯೆ ತೋರದೆ ಅಲ್ಲಿಂದ ಹೋಗುವಾಗ ಎರಡು ಕಾರು ಮತ್ತು ಮೂರು ಸ್ಕೂಟರ್‌ಗಳಲ್ಲಿ ಹಿಂಬಾಲಿಸಿಕೊಂಡು ಬಂದ ತಂಡ ಮನೆ ಮುಂದೆ ನಮ್ಮನ್ನು ಹಾಗೂ ಸ್ನೇಹಿತನನ್ನು ತಡೆದು ನಿಲ್ಲಿಸಿ ಕಬ್ಬಿಣದ ಸಲಾಕೆಯಿಂದ ಹೊಡೆದು ಗಾಯಗೊಳಿಸಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಗಾಯಾಳು ಧ್ವನೀಶ್ ಆರೋಪಿಸಿದ್ದಾರೆ.