ಉಪ್ಪಿನಂಗಡಿ: ಭೂ ವಿವಾದದ ಹಿನ್ನೆಲೆ, ಜೆಸಿಬಿಯಿಂದ ಸಮತಟ್ಟು ಮಾಡುತ್ತಿದ್ದವರ ಮೇಲೆ 7 ಮಂದಿಯ ತಂಡ ಹಲ್ಲೆ ನಡೆಸಿದೆ ಎಂದು ತೆಕ್ಕಾರು ಗ್ರಾಮದ ಬೀಪಾತುಮ್ಮ(75) ಎಂಬುವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಅಬೂಬಕ್ಕರ್, ತೌಷಿಫ್, ಸತ್ತಾರ್, ಸುಲೈಮಾನ್, ಹ್ಯಾರೀಶ್, ಅಬ್ದುಲ್ ರಜಾಕ್, ಫರ್ದಾನ್ ಎಂಬುವರು ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದಾರೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಬಾಜಾರು ಬೈಲುಮೇಲುಮನೆಯ ನಿವಾಸಿ ಸುಲೈಮಾನ್ ಎಂಬುವರು ಗುರುವಾರ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಮಸೀದಿಗೆ ಸೇರಿದ ಕೃಷಿ ತೋಟಕ್ಕೆ ನೀರು ಸರಬರಾಜು ಮಾಡಲಾಗುತ್ತಿರುವ ಮುಖ್ಯ ಪೈಪ್‌ಲೈನ್‌ನ್ನು ಉದ್ದೇಶಪೂರ್ವಕವಾಗಿ ಕಡಿದು ಹಾನಿಗೊಳಿಸಲಾಗಿದೆ. ಅದೇ ಸ್ಥಳದ ಸಮೀಪದಲ್ಲಿರುವ 110 ಕೆವಿ ವಿದ್ಯುತ್ ಟವರ್ ಬಳಿ ಅಕ್ರಮವಾಗಿ ಜೆಸಿಬಿ ತಂದು ಅಗೆತ ಮಾಡಿ ಸಾರ್ವಜನಿಕರ ಸುರಕ್ಷತೆಗೆ ಮಾರಕವಾಗುವ ಕೃತ್ಯವೆಸಗಿದ್ದಾರೆಂದು ಅಬ್ದುಲ್ ನಝೀರ್, ಅಬ್ದುಲ್ ಗಫಾರ್, ಬೀಪಾತುಮ್ಮಾ, ಬಿ.ಎಸ್.ಆರೀಸ್, ರಯಾನತ್ ಎಂಬವರ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.