cheating 
ಉಡುಪಿ

ಎಣ್ಣೆಯ ಜತೆಗೆ ನಗದು ವಂಚಿಸಿದ ಆಸಾಮಿ

ಪುತ್ತೂರು ಗ್ರಾಮಾಂತರ: ಗ್ರಾಹಕನ ಸೋಗಿನಲ್ಲಿ ಅಂಗಡಿಯೊಳಗೆ ಹೆಲ್ಮೆಟ್ ಧರಿಸಿ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ‘ಗೂಗಲ್ ಪೇ’ ಮೂಲಕ ಹಣ ಪಾವತಿಸಿದಂತೆ ನಟಿಸಿ ವರ್ತಕರೊಬ್ಬರಿಗೆ ವಂಚಿಸಿ ಪರಾರಿಯಾದ ಘಟನೆ ಬುಧವಾರ ಸಂಜೆ ಒಳಮೊಗ್ರು ಗ್ರಾಮದ ಕುಂಬ್ರದ ಗಾಣಿಗ ಆಯಿಲ್ ಮಿಲ್‌ನಲ್ಲಿ ನಡೆದಿದೆ.

ಸ್ಕೂಟರ್‌ನಲ್ಲಿ ಬಂದ ಅಪರಿಚಿತನೊಬ್ಬ 200 ರೂ. ಮೌಲ್ಯದ ತೆಂಗಿನ ಎಣ್ಣೆ ಖರೀದಿಸಿದ್ದಾನೆ. ಬಳಿಕ ನನ್ನಲ್ಲಿ ನಗದು ಇಲ್ಲ ಅಲ್ಲದೆ ನನಗೆ 1 ಸಾವಿರ ರೂ. ಹಣದ ಅಗತ್ಯವಿದ್ದು ಎಣ್ಣೆಯ ಹಣ ಸೇರಿಸಿ 1200 ರೂ. ಗೂಗಲ್ ಪೇ ಮಾಡುತ್ತೇನೆ. 1 ಸಾವಿರ ರೂ. ನಗದು ಕೊಡಿ ಎಂದು ಅಂಗಡಿ ಮಾಲಕಿಯಲ್ಲಿ ವಿನಂತಿಸಿದ್ದಾನೆ. ಆತನ ಮಾತು ನಂಬಿದ ಅಂಗಡಿ ಮಾಲಕಿ ಆತನಿಗೆ 1 ಸಾವಿರ ರೂ. ನಗದು ಹಣ ನೀಡಿದ್ದಾರೆ. ಆತ ತನ್ನ ಮೊಬೈಲ್‌ನಲ್ಲಿ ಗೂಗಲ್ ಪೇ ಮಾಡಿದಂತೆ ನಟಿಸಿ, ಕ್ಷಣಾರ್ಧದಲ್ಲಿ ಸ್ಕೂಟರ್ ಏರಿ ತೆರಳಿದ್ದಾನೆ. ಸಂಶಯಗೊಂಡ ಅಂಗಡಿ ಮಾಲಕಿ ಪರಿಶೀಲಿಸಿದಾಗ ಖಾತೆಗೆ ಹಣ ಜಮೆಯಾಗದಿರುವುದು ಕಂಡು ಬಂದಿದೆ.