ಹದಗೆಟ್ಟು ಸಂಚಾರಕ್ಕೆ ತೊಡಕಾಗಿರುವ ಹೇನ್‌ಬೇರು ರಸ್ತೆ. 
ಉಡುಪಿ

ಡಾಂಬರು ಕಿತ್ತುಬಂದು ಸಂಚಾರ ದುಸ್ತರ

ಇಂದಿರಾ ಎನ್ ಕೆ
ಬೈಂದೂರು: ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹೇನ್‌ಬೇರ್ ಗ್ರಾಮದ ರಸ್ತೆಯ ಡಾಂಬರು ಕಿತ್ತು ಹೋಗಿ ಜಲ್ಲಿ ಕಲ್ಲು ಚೆಲ್ಲಾಪಿಲ್ಲಿಯಾಗಿ ಮಣ್ಣಿನ ರಸ್ತೆಯಾಗಿ ಮಾರ್ಪಟ್ಟಿದದ್ದು ಸಂಚಾರ ದುರಸ್ತರವಾಗಿದೆ.
ಒತ್ತಿನೆಣೆ ಬಳಿ ರಾಷ್ಟ್ರೀಯ ಹೆದ್ದಾರಿಯಿಂದ ಒಂದು ಕಿ.ಮೀ. ಕಾಡುದಾರಿಯಲ್ಲಿ ತೆರಳಬೇಕಾಗಿದ್ದು, ನಿತ್ಯ ಕೆಲಸಕ್ಕೆ ಹೋಗುವವರು ಈ ರಸ್ತೆಯನ್ನು ಅವಲಂಬಿಸಿದ್ದು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯಲ್ಲಿ ವಾಹನ ಸಂಚಾರ ಇರಲಿ ನಡೆದಾಡಲೂ ಹೆಣಗಾಡುವಂತಾಗಿದೆ.
ಅಂದಿನ ಶಾಸಕರಾಗಿದ್ದ ಕೆ.ಗೋಪಾಲ ಪೂಜಾರಿ ನೇತೃತ್ವದಲ್ಲಿ ಹೇನ್‌ಬೇರ್ ಭಾಗದ ರಸ್ತೆಗೆ ಡಾಂಬರೀಕರಣ, ಸರ್ಕಾರಿ ಬಸ್ ಸೌಲಭ್ಯ ಸೇರಿದಂತೆ ಹಲವು ಮೂಲಸೌಕರ್ಯ ಒದಗಿಸಲಾಗಿತ್ತು. ಆದರೆ ಈಗ ರಸ್ತೆ ಹದಗೆಟ್ಟ ಹಿನ್ನೆಲೆ ಈ ವಾರ್ಗದಲ್ಲಿ ಬಸ್ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ. ರಿಕ್ಷಾದವರು ಇಲ್ಲಿಗೆ ಬಾಡಿಗೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಒಂದು ವೇಳೆ ಬಂದರೂ ದುಪಟ್ಟು ಬಾಡಿಗೆ ಕೇಳುತ್ತಾರೆ. ಹೇನ್‌ಬೇರ್ ರಸ್ತೆ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಮೂಲಸೌಕರ್ಯ ವಂಚಿತ
ಈ ಪ್ರದೇಶ ಕುಡಿಯುವ ನೀರು, ದಾರಿದೀಪ, ಮೊಬೈಲ್ ನೆಟ್ವರ್ಕ್ ಮೊದಲಾದ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ಸಂಜೆ ವೇಳೆ ಸಂಚರಿಸುವುದು ಕಷ್ಟ ಸಾಧ್ಯ. ಅವಡಗಳು ಸಂಭವಿಸುವ ಮುನ್ನ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹೇನ್‌ಬೇರು ಪ್ರದೇಶ ಬೈಂದೂರು ಪಟ್ಟಣ ಪಂಚಾಯಿತಿ ಭಾಗವಾಗಿದ್ದು, ಪಂಚಾಯಿತಿಗೆ ಚುನಾವಣೆ ನಡೆಯದೆ ಸದಸ್ಯರಿಲ್ಲ. ಹಲವಾರು ಕಾರಣಗಳಿಂದ ಅಭಿವೃದ್ಧಿ ಕುಂಠಿತವಾಗಿದೆ. ಸರ್ಕಾರದ ಅನುದಾನ ಸಮಸ್ಯೆಯಿಂದ ಕ್ಷೇತ್ರದ ಹಲವು ಪ್ರದೇಶಗಳ ಸ್ಥಿತಿ ಇದೇ ರೀತಿ ಇದೆ. ಶಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಹೇನ್‌ಬೇರು ಭಾಗದ ಅಗತ್ಯತೆಗಳನ್ನು ಹಂತ ಹಂತವಾಗಿ ಪರಿಹರಿಸಲು ಪ್ರಾವಾಣಿಕ ಪ್ರಯತ್ನ ಮಾಡಲಾಗುವುದು.

ಹೇನ್‌ಬೇರ್‌ಗ್ರಾಮ ಸಮರ್ಪಕ ರಸ್ತೆ, ಕುಡಿಯುವ ನೀರು, ದಾರಿದೀಪ, ಮೊಬೈಲ್ ನೆಟ್‌ವರ್ಕ್ ಸೇರಿದಂತೆ ಹಲವು ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಇಂತಹ ಪ್ರದೇಶವನ್ನು ಪಟ್ಟಣ ಪಂಚಾಯಿತಿಗೆ ಸೇರಿಸಿರುವುದೇ ಹಾಸ್ಯಾಸ್ಪದ. ಇಲ್ಲಿನ ಹಲವು ಸಮಸ್ಯೆಗಳ ಬಗ್ಗೆ ಆಡಳಿತದ ಗಮನಕ್ಕೆ ತರಲಾಗಿದೆ. ಇನ್ನಾದರೂ ಸಂಬಂಧಿತರು ಎಚ್ಚೆತ್ತು ಈ ಭಾಗದ ಅಭಿವೃದ್ಧಿ ಬಗ್ಗೆ ಗಮನಹರಿಸಬೇಕು.