ಉಡುಪಿ: ವಿದ್ಯಾರ್ಥಿ ಸಂಬಂಧಿತ ವೇದಿಕೆಗಳಲ್ಲಿ ಹಾಗೂ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ನಾಯಕತ್ವದ ಗುಣ ಬೆಳೆಯುತ್ತದೆ. ಅಲ್ಲದೆ, ಸಂವಹನ ಕೌಶಲವೂ ಸುಧಾರಿಸಿ, ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ ಬಯಸುವ ವಿದ್ಯಾರ್ಥಿಗಳಿಗೆ ತಮ್ಮ ಕೌಶಲ ಬೆಳೆಸಿಕೊಳ್ಳಲು ಕೃತಕ ಬುದ್ಧಿಮತ್ತೆ (ಎಐ) ಸಹಕಾರಿ ಎಂದು ರೋಬೋಸಾಫ್ಟ್ ಟೆಕ್ನಾಲಜೀಸ್ನ ಟೆಕ್ನಿಕಲ್ ಆರ್ಕಿಟೆಕ್ಟ್ ಶೋಧನ್ ಎಸ್. ತಿಳಿಸಿದರು.
ಉಡುಪಿಯ ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ 2026-27ನೇ ಸಾಲಿನ ಟೆಕ್ ಎಕ್ಸ್ಪ್ಲೋರ್ ಎಂಸಿಎ ವಿದ್ಯಾರ್ಥಿ ವೇದಿಕೆ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ವೇದಿಕೆಯ ಸಂಯೋಜಕಿ ಸ್ನೇಹಾ ರಾಧಾಕೃಷ್ಣನ್ ಪದಾಧಿಕಾರಿಗಳನ್ನು ಪರಿಚಯಿಸಿ, ಶೋಧನ್ ಅವರಿಗೆ ಪದಾಧಿಕಾರದ ಬ್ಯಾಡ್ಜ್ ತೊಡಿಸಿದರು. ಎಂಸಿಎ ವಿಭಾಗದ ಮುಖ್ಯಸ್ಥ ವೇಣುಗೋಪಾಲ ರಾವ್ ಎ.ಎಸ್. ಪ್ರತಿಜ್ಞಾ ವಿಧಿ ನೆರವೇರಿಸಿದರು. ಟೆಕ್ಎಕ್ಸ್ಪ್ಲೋರ್ ಅಧ್ಯಕ್ಷ ಸ್ವಸ್ತಿಕ ನಾಯಕ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷದ ಕಾರ್ಯಯೋಜನೆ ವಿವರಿಸಿದರು. ಕಾಲೇಜ್ನ ನಿರ್ದೇಶಕ ಡಾ. ಪಿ.ಎಸ್. ಐತಾಳ ಅಧ್ಯಕ್ಷತೆ ವಹಿಸಿದ್ದರು.
ಸಭಾ ಕಾರ್ಯಕ್ರಮದ ಬಳಿಕ 'ಕೃತಕ ಬುದ್ಧಿಮತ್ತೆ ಹಾಗೂ ಮಾನವ ಬುದ್ಧಿಮತ್ತೆ' ವಿಷಯ ಕುರಿತು ಶೋಧನ್ ಎಸ್. ತಾಂತ್ರಿಕ ಉಪನ್ಯಾಸ ನೀಡಿದರು.
ಪೂಜಾ ಮತ್ತು ತಂಡದವರು ಪ್ರಾರ್ಥಿಸಿದರು. ವೇದಿಕೆಯ ಕಾರ್ಯದರ್ಶಿ ಅಕ್ಷತಾ ಸ್ವಾಗತಿಸಿದರು. ಉಪಾಧ್ಯಕ್ಷ ಧ್ರುವ ಭಟ್ ವಂದಿಸಿದರು. ಎಂಸಿಎ ವಿದ್ಯಾರ್ಥಿನಿ ದಶಮಿ ಕಾರ್ಯಕ್ರಮ ನಿರೂಪಿಸಿದರು.