ತೆಕ್ಕಟ್ಟೆ ಹಯಗ್ರೀವದಲ್ಲಿ 50ರ ಐಸಿರಿ ಒಡ್ಡೋಲಗ ಸರಣಿ ಕಾರ್ಯಕ್ರಮ ಉದ್ಘಾಟಿಸಿ ನಾಡೋಜ ಜಿ.ಶಂಕರ್ ಮಾತನಾಡಿದರು. ಪ್ರಮುಖರಾದ ಕೆ.ಆರ್.ನಾಯ್ಕ, ಡಾ.ಹೇಮಂತ್ ಕುಮಾರ್, ಅಶೋಕ್ ಶೆಟ್ಟಿ ಹಂದಕುಂದ, ಸೀತಾರಾಮ ಶೆಟ್ಟಿ ಮಲ್ಯಾಡಿ, ಸಕ್ಕಟ್ಟು ಮಂಜುನಾಥಯ್ಯ ಇದ್ದರು. 
ಉಡುಪಿ

ಕಲಾಭಿಮಾನಿಗಳಿಂದ ಕಲಾ ಜೀವಿಯ ಕನಸು ನನಸು

ಕೋಟ: ಕಲಾ ತಂಡಗಳು ಸದುದ್ದೇಶದಿಂದ ಜೀವ ತಳೆಯುತ್ತವೆ. ಕಲಾಜೀವಿ ಕುಟುಂಬದ ಉತ್ಸಾಹ ನಿರಂತರವಾಗಿ 50 ಕಲಾವಿದರ ಸಂದರ್ಶನದಿಂದ ಅವಿರತವಾಗಿ ಶ್ರಮಿಸಿ ಇದೀಗ ಸಂಭ್ರಮ ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ. ಕಲಾ ಜೀವಿಯ ಕನಸನ್ನು ಕಲಾಭಿಮಾನಿಗಳು ನನಸು ಮಾಡಬೇಕು ಎಂದು ನಾಡೋಜ ಜಿ.ಶಂಕರ್ ಹೇಳಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಭಾನುವಾರ ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಸಹಕಾರದೊಂದಿಗೆ ಕಲಾ ಜೀವಿ ನಾದನೈದಿಲೆ ಕೋಟೇಶ್ವರ ದಿ.ರವಿರಾಜ ಕೋಟೇಶ್ವರ ಸ್ಮರಣಾರ್ಥ 50ರ ಐಸಿರಿ ಒಡ್ಡೋಲಗ ಸರಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಾ.ಆದರ್ಶ ಹೆಬ್ಬಾರ್ ಮಾತನಾಡಿದರು. 50 ಕಲಾವಿದರನ್ನು ರಂಗದಲ್ಲಿ ಗೌರವಿಸಲಾಯಿತು. ಪ್ರಮುಖರಾದ ಕೆ.ಆರ್.ನಾಯ್ಕ, ಡಾ.ಹೇಮಂತ್ ಕುಮಾರ್, ಅಶೋಕ್ ಶೆಟ್ಟಿ ಹಂದಕುಂದ, ಸೀತಾರಾಮ ಶೆಟ್ಟಿ ಮಲ್ಯಾಡಿ, ಸಕ್ಕಟ್ಟು ಮಂಜುನಾಥಯ್ಯ, ಎಚ್.ಎಸ್.ಬಸವರಾಜ್, ರಾಜೇಶ್ ಕೋಡಿ ಮತ್ತಿತರರು ಉಪಸ್ಥಿತರಿದ್ದರು.
ಮಂಜುನಾಥ ಹಿಲಿಯಾಣ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಸಂದರ್ಶಿತ ಕಲಾವಿದರಿಂದ ಯಕ್ಷಗಾನ ವೈಭವ ಮತ್ತು ಯಕ್ಷಗಾನ ವೀರಮಣಿ ಕಾಳಗ ರಂಗ ಪ್ರಸ್ತುತಿಗೊಂಡಿತು.