Arrest 
ಉಡುಪಿ

ತಂಬಾಕು ಉತ್ಪನ್ನ ಸಾಗಿಸುತ್ತಿದವರ ಸೆರೆ

ಕಾಸರಗೋಡು: ಮಂಜೇಶ್ವರ ಠಾಣೆ ಪೊಲೀಸರು ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ನಿಷೇಧಿತ ತಂಬಾಕು ಉತ್ಪನ್ನ ಪಾನ್‌ಮಸಾಲ ಸಾಗಿಸುತ್ತಿದ್ದ ಇಬ್ಬರನ್ನು ಸೆರೆಹಿಡಿದಿದು ಬಳಿಕ ಬಿಡುಗಡೆಗೊಳಿಸಲಾಗಿದೆ. ಅವರಿಂದ 415 ಪ್ಯಾಕೆಟ್ ತಂಬಾಕು ಉತ್ಪನ್ನ ವಶಪಡಿಸಿಕೊಳ್ಳಲಾಗಿದೆ.
ಹೊಸಂಗಡಿ ರೈಲ್ವೇಗೇಟ್ ಸಮೀಪದ ಪಾನ್‌ಸ್ಟಾಲ್ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ಉತ್ತರ ಪ್ರದೇಶ ನಿವಾಸಿಗಳಾದ ಅಮಿತ್ ಸೋಂಕಾರ್ ಹಾಗೂ ಮಂಜಿತ್ ಸೋಂಕಾರ್ ಅವರನ್ನು ಸೆರೆಹಿಡಿದು ಬಳಿಕ ನೋಟೀಸ್ ನೀಡಲಾಗಿದೆ.