Arrest 
ಉಡುಪಿ

ಮಾದಕ ದ್ರವ್ಯ ಸಾಗಾಟ ಆರೋಪಿ ಬಂಧನ

ಕಾಸರಗೋಡು: ಹಲವು ಮಾದಕ ದ್ರವ್ಯ ಸಾಗಾಟ ಪ್ರಕರಣದ ಆರೋಪಿ, ಚೆಂಗಳ ಪಾಡಿ ಗ್ರಾಮದ ಬೆಳ್ಳೂರಡ್ಕ ಕಲ್ಲಕಟ್ಟ ನಿವಾಸಿ ಅಬ್ದುಲ್ ಮುನಾಬರ್ ಅಲಿಯಾಸ್ ಅಬ್ದುಲ್ ಮುನಾವಿರ್ (29) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ವಿದ್ಯಾನಗರ ಠಾಣೆ ಎಸ್‌ಐ ವಿಜಯನ್ ಮೇಲೋತ್ ನೇತೃತ್ವದಲ್ಲಿ ಜಿಲ್ಲಾ ಕ್ರೈಂ ಬ್ರಾಂಚ್ ಸ್ಕ್ವಾಡ್ ಒಳಗೊಂಡ ಪೊಲೀಸರ ತಂಡ ಬಂಧಿಸಿದೆ. ಈತನ ವಿರುದ್ಧ ಕಾಸರಗೋಡು ಮತ್ತು ವಿದ್ಯಾನಗರ ಠಾಣೆಗಳಲ್ಲಿ ಹಲವು ಮಾದಕ ದ್ರವ್ಯ ಪ್ರಕರಣಗಳಿದ್ದು, ಎರಡು ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.