ಅರೆಭಾಷೆ ಅಕಾಡೆಮಿ ಲೋಗೋ 
ಉಡುಪಿ

ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ

ಇಂದಿರಾ ಎನ್ ಕೆ
ಸುಳ್ಯ: ಅರೆಭಾಷೆ ಅಕಾಡೆಮಿ ವತಿಯಿಂದ ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ಒಂದು ದಿನದ ವಿಚಾರಗೋಷ್ಠಿ ಫೆ.24 ಮತ್ತು 25ರಂದು ಸುಳ್ಯದ ನೆಹರು ಸ್ಮಾರಕ ಮಹಾವಿದ್ಯಾಲಯದಲ್ಲಿ ನಡೆಯಲಿದೆ ಎಂದು ಅರೆಭಾಷೆ ಅಕಾಡೆಮಿ ಸದಸ್ಯ ಚಂದ್ರಶೇಖರ ಪೇರಾಲು ಹಾಗೂ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಟಿ.ವಿಶ್ವನಾಥ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
24ರಂದು ಅರೆಭಾಷೆ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದ್ದು, ಬೆಳಗ್ಗೆ 9.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್‌ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಉದ್ಘಾಟಿಸುವರು. ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆ ವಹಿಸುವರು ಎಂದರು.
ಪ್ರಥಮ ದಿನದ ಅಧಿವೇಶನದಲ್ಲಿ ಡಾ.ಧನಂಜಯ ಕುಂಬ್ಳೆ, ಡಾ.ನರೇಂದ್ರ ರೈ ದೇರ್ಲ ಪ್ರಬಂಧ ಮಂಡಿಸಲಿದ್ದು, ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಅಧ್ಯಕ್ಷತೆ ವಹಿಸುವರು. ದ್ವಿತೀಯ ಅಧಿವೇಶನದಲ್ಲಿ ಕೆ.ಆರ್.ಗಂಗಾಧರ ಹಾಗೂ ಪುರುಷೋತ್ತಮ ಕರಂಗಲ್ಲು ವಿಚಾರ ಮಂಡಿಸಲಿದ್ದು, ಸಾಹಿತಿ ಕೆ.ಇ.ರಾಧಾಕೃಷ್ಣ ಬೆಂಗಳೂರು ಅಧ್ಯಕ್ಷತೆ ವಹಿಸುವರು. ಮಧ್ಯಾಹ್ನ ಬಳಿಕ ಅರೆಭಾಷೆ ಸಂಸ್ಕೃತಿ ವಿಚಾರ ಸಂಕಿರಣ ನಡೆಯಲಿದೆ. ವಿವಿಧ ವಿಚಾರಗಳ ಕುರಿತು ದೊಡ್ಡಣ ಬರೆಮೇಲು, ಜಯಪ್ರಕಾಶ ಕುಕ್ಕೆಟ್ಟಿ, ಡಾ.ಕರುಣಾಕರ ನಿಡಿಂಜಿ, ಡಾ.ದಯಾನಂದ ಕೂಡಕಂಡಿ ಉಪನ್ಯಾಸ ನೀಡುವರು. ಪಟ್ಟಡ ಶಿವಕುಮಾರ್ ಅಧ್ಯಕ್ಷತೆ ವಹಿಸುವರು ಎಂದು ಚಂದ್ರಶೇಖರ ಪೇರಾಲು ತಿಳಿಸಿದರು.

ಗಡಿನಾಡು ಭಾಷಾ ಪರಂಪರೆ ಗೋಷ್ಠಿ

ಕೆ.ಟಿ.ವಿಶ್ವನಾಥ ಮಾತನಾಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ 25ರಂದು ಗಡಿನಾಡು ಸುಳ್ಯ ಪರಿಸರದ ಭಾಷಾ ಪರಂಪರೆ ಕುರಿತು ಒಂದು ದಿನದ ವಿಚಾರಗೋಷ್ಠಿ ನಡೆಯಲಿದ್ದು, 9.30ಕ್ಕೆ ಎಒಎಲ್‌ಇ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಉದ್ಘಾಟಿಸುವರು. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಕಾರ‌್ಯದರ್ಶಿ ಡಾ.ಸಂತೋಷ ಹಾನಗಲ್ಲ, ಸದ್ಸಯ ಯಾಕೂಬ್ ಖಾದರ್ ಗುಲ್ಪಾಡಿ, ಡಾ.ರುದ್ರಕುಮಾರ್, ಮಧುರಾ ಉಪಸ್ಥಿತರಿರುವರು. ವಿಶ್ವನಾಥ ಕೆ.ಟಿ. ಅಧ್ಯಕ್ಷತೆ ವಹಿಸುವರು. ಕವಯತ್ರಿ ಸ್ಮಿತಾ ಅಮೃತರಾಜ್, ಡಾ.ಪೂವಪ್ಪ ಕಣಿಯೂರು, ರಮೇಶ್ ಮಂಚಕಲ್ಲು ಮಂಗಳೂರು, ಬರಹಗಾರ್ತಿ ಸಹನಾ, ಡಾ.ಸುಂದರ ಕೇನಾಜೆ, ಇಸ್ಮತ್ ಪಜೀರ್, ಪಶು ವೈದ್ಯಾಧಿಕಾರಿ ಡಾ.ನಿತಿನ್‌ಪ್ರಭು, ಡಾ.ಸೆಲ್ವರತ್ನಂ ಕಂದಡ್ಕ ವಿವಿಧ ವಿಚಾರಗಳನ್ನು ಮಂಡಿಸಲಿದ್ದಾರೆ.
ಮಧ್ಯಾಹ್ನ 2.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಡಾ.ರುದ್ರಕುಮಾರ್ ಅಧ್ಯಕ್ಷತೆ ವಹಿಸುವರು. ಹಿರಿಯ ವಿಮರ್ಶಕ ಎಸ್.ಆರ್.ವಿಜಯಶಂಕರ್ ಉಪಸ್ಥಿತರಿರುವರು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಎನ್‌ಎಂಸಿ ಪ್ರಾಂಶುಪಾಲ ಡಾ.ರುದ್ರಕುಮಾರ್ ಎಂ.ಎಂ., ಅರೆಭಾಷೆ ಅಕಾಡೆಮಿ ಸದಸ್ಯ ಡಾ.ಜ್ಞಾನೇಶ್ ಎನ್.ಎ., ಮಧುರಾ, ಲೋಕೇಶ್ ಪೆಲರ್ಂಪಾಡಿ, ಡಾ.ಅನುರಾಧಾ ಕುರುಂಜಿ ಉಪಸ್ಥಿತರಿದ್ದರು.