ಉಡುಪಿಯ ಶ್ರೀಕೃಷ್ಣ ಮಠದ ಸಮುಚ್ಚಯದಲ್ಲಿರುವ ಪುತ್ತಿಗೆ ಮಠದ ಸುಧೀಂದ್ರ ತೀರ್ಥ ಶ್ರೀಪಾದರ ವೃಂದಾವನ. 
ಉಡುಪಿ

ಪುತ್ತಿಗೆ ಮಠದ ಸುಧೀಂದ್ರ ತೀರ್ಥರ ಆರಾಧನಾ ಮಹೋತ್ಸವ

* ವೃಂದಾವನಕ್ಕೆ ಸುಗುಣೇಂದ್ರ ಶ್ರೀಗಳಿಂದ ವಿಶೇಷ ಪೂಜೆ

ಉಡುಪಿ: ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಗುರುಗಳಾದ ಸುಧೀಂದ್ರ ತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವದ ನಿಮಿತ್ತ ಶ್ರೀಕೃಷ್ಣ ಮಠದ ಸಮುಚ್ಚಯದಲ್ಲಿರುವ ಶ್ರೀಗಳ ವೃಂದಾವನಕ್ಕೆ ಬುಧವಾರ (ಮಾ.4) ವಿಶೇಷ ಪೂಜೆ ಸಲ್ಲಿಸಿದರು. ಪರ್ಯಾಯ ಶೀರೂರು ಮಠದ ವೇದವರ್ಧನ ತೀರ್ಥ ಶ್ರೀಪಾದರೂ ಸಹ ವೃಂದಾವನಕ್ಕೆ ಪೂಜಿಸಿದರು.
ಅಭಿನವ ಋಷ್ಯಶೃಂಗ, ಅಕ್ಷರಕೋಟಿ ಶ್ರೀಕೃಷ್ಣ ಮಂತ್ರೋಪಾಸಕ, ಯತಿಕುಲ ಚಕ್ರವರ್ತಿ, ತಪಶ್ಚಕ್ರವರ್ತಿ, ಅನಂತಶ್ರೀ ವಿಭೂಷಿತ ಇತ್ಯಾದಿ ಅನೇಕ ಬಿರುದು ಗಳಿಸಿದ್ದರು. ಶ್ರೀಮದಾಚಾರ್ಯರ ಸನ್ಯಾಸಿ ಶಿಷ್ಯವರ್ಗದಲ್ಲಿ ದೃಢಕಾಯರೆಂದೇ ಪ್ರಸಿದ್ಧರಾಗಿದ್ದರು. ಮಹಾಜ್ಞಾನಿಗಳಾದ ಶ್ರೀಮದ್​ ಉಪೇಂದ್ರ ತೀರ್ಥರ ಪೀಠವಾದ ಪುತ್ತಿಗೆ ಮಠದ ಯತಿ ಪರಂಪರೆಯಲ್ಲಿ ಮಾತ್ರವಲ್ಲದೆ ಉಡುಪಿಯ ಅಷ್ಟ ಮಠಗಳ ಯತಿ ಪರಂಪರೆಯಲ್ಲಿಯೇ ವಿಶಿಷ್ಟ ಸ್ಥಾನಮಾನ ಗಳಿಸಿದ್ದರು.
"

ಮಹಾತಪಸ್ವಿ, ಶಾಪಾನುಗ್ರಹ ಸಮರ್ಥರಾಗಿದ್ದ ಸುಧೀಂದ್ರ ತೀರ್ಥರು ಶ್ರೀಕೃಷ್ಣ ದೇವರಿಗೆ ಸನಕಾದಿ ಮುನಿಗಳು ಪೂಜಿಸುವುದನ್ನು ಸಾಕ್ಷಾತ್​ ಕಂಡವರು. ಶತಾಯುಷಿಗಳಾಗಿದ್ದ ನಮ್ಮ ಗುರುಗಳು ನಾಲ್ಕು ಬಾರಿ ಪರ್ಯಾಯ ಪೂಜೆ ನೆರವೇರಿಸಿ ಶ್ರೀಕೃಷ್ಣನ ಸಾಕ್ಷಾತ್ಕಾರ ಮಾಡಿಕೊಂಡವರು. ವೃಂದಾವನಸ್ಥರಾಗಿದ್ದರೂ ಭಕ್ತರು ಬೇಡಿದ್ದನ್ನು ಇಂದಿಗೂ ಕರುಣಿಸುವ ಮಹಾಕರುಣಾಳುವಾಗಿದ್ದಾರೆ.