ಮಾಹಿತಿ ಕಾರ್ಯಾಗಾರದಲ್ಲಿ ಮಾಹಿತಿ ಶಿಕ್ಷಣ ಸಂವಹನ ಸಂಯೋಜಕ ಭರತ್ ರಾಜ್ ಕೆ. ಮಾತನಾಡಿದರು. ಪ್ರಮುಖರಾದ ಮೋಹಿತ್ ವೈ.ಎಸ್., ಶಾರದಾ, ಸಂದೇಶ್ ಕೆ.ಎನ್. ಮೊದಲಾದವರು ಉಪಸ್ಥಿತರಿದ್ದರು. 
ಉಡುಪಿ

ಯುಕ್ತಧಾರ ಕ್ರಿಯಾ ಯೋಜನೆಗೆ ಅನುಮೋದನೆ

ಇಂದಿರಾ ಎನ್ ಕೆ
ಕಡಬ: ಮಹಾತ್ಮ ಗಾಂಧಿ ನರೇಗಾ ಯೋಜನೆ ಪ್ರಸ್ತುತ ವಿಬಿ ಜಿ ರಾಮ್ ಜಿಯಾಗಿ ಕಾಯ್ದೆ ಬದಲಾವಣೆಗೊಂಡಿದ್ದು ನೂತನ ಕಾಯ್ದೆಯಡಿ ಯುಕ್ತಧಾರ ತಂತ್ರಾಂಶದ ಮೂಲಕ ತಯಾರಿಸಿದ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ. ಫಲಾನುಭವಿಗಳು ಸದರಿ ಕಾಮಗಾರಿಗಳನ್ನು ಶೀಘ್ರ ಪ್ರಾರಂಭಿಸಬೇಕು ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಹಾಯಕ ನಿರ್ದೇಶಕ ಸಂದೇಶ್ ಕೆ.ಎನ್. ತಿಳಿಸಿದರು.
ಕೊಯಿಲ ಗ್ರಾಪಂ ಸಭಾಂಗಣದಲ್ಲಿ 2026-27ನೇ ಸಾಲಿನ ಯುಕ್ತಧಾರ ಕ್ರಿಯಾ ಯೋಜನೆಯ ಫಲಾನುಭವಿಗಳಿಗೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಆ್ಯಂಡ್ ಅಜೀವಿಕ ಮಿಷನ್ (ಗ್ರಾಮೀಣ) ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಮಾಹಿತಿ ಶಿಕ್ಷಣ ಸಂವಹನ ಸಂಯೋಜಕ ಭರತ್ ರಾಜ್ ಕೆ. ಮಾತನಾಡಿ, 2047ಕ್ಕೆ ವಿಕಸಿತ ಭಾರತವಾಗಬೇಕೆಂಬ ದೂರದೃಷ್ಟಿಯನ್ನು ಯೋಜನೆ ಹೊಂದಿದೆ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಕೂಲಿ ಹಣ ಜಮೆಯಾಗುತ್ತದೆ ಎಂದರು.
ಯೋಜನೆಯ ಸಿವಿಲ್ ವಿಭಾಗದ ತಾಂತ್ರಿಕ ಸಂಯೋಜಕ ಮೋಹಿತ್ ವೈ.ಎಸ್., ವಿಬಿ ಜಿ ರಾಮ್ ಜಿ ಯೋಜನೆ ಫಲಾನುಭವಿಗಳು, ಎನ್‌ಆರ್‌ಎಲ್‌ಎಂ ಪದಾಧಿಕಾರಿಗಳು, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು. ಗ್ರಾಪಂ ಕಾರ್ಯದರ್ಶಿ ಶಾರದಾ ಸ್ವಾಗತಿಸಿ, ವಂದಿಸಿದರು.