ಕೋಟ ಮೆಸ್ಕಾಂ ಉಪ ವಿಭಾಗದ ಜನಸಂಪರ್ಕ ಸಭೆ ಮೆಸ್ಕಾಂ ಜಿಲ್ಲಾ ಅಧೀಕ್ಷಕ ಇಂಜಿನಿಯರ್ ಬಿ.ರಾಕೇಶ್ ಅಧ್ಯಕ್ಷತೆಯಲ್ಲಿ ಜರುಗಿತು. ಪ್ರಮುಖರಾದ ಯಶವಂತ, ಶಿವ ಕುಮಾರ್, ಪ್ರತಾಪ್‌ಚಂದ್ರ ಶೆಟ್ಟಿ ಇದ್ದರು.  
ಉಡುಪಿ

ಗ್ರಾಹಕರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ

ಇಂದಿರಾ ಎನ್ ಕೆ

ಕೋಟ: ಕೋಟ ಮೆಸ್ಕಾಂ ಉಪ ವಿಭಾಗದ ಜನಸಂಪರ್ಕ, ಅಹವಾಲು ಸ್ವೀಕಾರ ಸಭೆ ಬುಧವಾರ ಕೋಟ ಮೆಸ್ಕಾಂ ಉಪವಿಭಾಗದ ಸಭಾಂಗಣದಲ್ಲಿ ಜರುಗಿತು. ಕೋಟ ಹೋಬಳಿ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಹಲವು ಸಮಸ್ಯೆಗಳಿಗೆ ಮೆಸ್ಕಾಂ ಜಿಲ್ಲಾ ಅಧೀಕ್ಷಕ ಇಂಜಿನಿಯರ್ ಬಿ.ರಾಕೇಶ್ ಅಧಿಕಾರವಧಿಯಲ್ಲಿ ಪರಿಹಾರ ಕಂಡುಕೊಂಡ ಬಗ್ಗೆ ಸಾಮಾಜಿಕ ಕಾರ್ಯಕರ್ತರು ಪ್ರಶಂಸೆ ವ್ಯಕ್ತಪಡಿಸಿದರು.

ಮೆಸ್ಕಾಂ ಅಧೀಕ್ಷಕ ಬಿ.ರಾಕೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮೀಣ ಭಾಗದಿಂದ ಪಟ್ಟಣ ವ್ಯಾಪ್ತಿಯನ್ನು ಹೊಂದಿರುವ ಕೋಟ ಮೆಸ್ಕಾಂ ವ್ಯಾಪ್ತಿಯ ಯಾವುದೇ ಸಮಸ್ಯೆಗಳಿಗೆ ಮೆಸ್ಕಾಂ ಪರಿಹಾರ ಕಂಡುಕೊಳ್ಳಲಿದೆ. ಜನಸಂಪರ್ಕ ಸಭೆಗಳು ಗ್ರಾಹಕರ ಸಮಸ್ಯೆಗಳಿಗೆ ಸ್ಪಂದಿಸುವ, ಪ್ರತಿಹಂತದಲ್ಲೂ ಸಮಸ್ಯೆಗಳಿಂದ ಮುಕ್ತಿಗಾಣುವ ಸಭೆಗಳಾಗಿ ರೂಪುಗೊಂಡಿದೆ. ಗೃಹಜ್ಯೋತಿ ಪುನರ್ ನವೀಕರಣ ಶೇ.90ರಷ್ಟು ಪೂರ್ಣಗೊಂಡಿದ್ದು, ಬಾಕಿ ಇರಿಸಿಕೊಂಡವರು ಕೂಡಲೇ ತಮ್ಮ ಮೆಸ್ಕಾಂ ಮೂಲಕ ಗೃಹಜ್ಯೋತಿಯ ಫಲಾನುಭವಿಗಳಾಗಿ ಎಂದರು.
ಸಾಮಾಜಿಕ ಕಾರ್ಯಕರ್ತರಾದ ಪ್ರತಾಪ್ ಶೆಟ್ಟಿ ಸಾಸ್ತಾನ, ಐರೋಡಿ ವಿಠ್ಠಲ ಪೂಜಾರಿ, ನಾಗರಾಜ್ ಗಾಣಿಗ ಸಾಲಿಗ್ರಾಮ, ರಾಘವೇಂದ್ರ ಐರೋಡಿ, ವಿದ್ಯುತ್ ಗುತ್ತಿಗೆದಾರ ಶ್ರೀಕಾಂತ್ ಶೆಣೈ, ಗಿರೀಶ್ ಕುಂದರ್, ಐರೋಡಿ ನಟರಾಜ್ ಗಾಣಿಗ, ಕುಂದಾಪುರ ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ, ಕುಂದಾಪುರ ಉಪ ವಿಭಾಗದ ಲೆಕ್ಕಾಧಿಕಾರಿ ಶಿವಕುಮಾರ್, ಕೋಟ ವಿಭಾಗದ ಸಹಾಯಕ ಕಾರ್ಯವಾಹಕ ಇಂಜಿನಿಯರ್ ಪ್ರತಾಪ್‌ಚಂದ್ರ ಶೆಟ್ಟಿ ಸಹಾಯಕ ಇಂಜಿನಿಯರ್(ತಾಂತ್ರಿಕ) ಶ್ರೀಕಾಂತ್, ಕೋಟ ಮೆಸ್ಕಾಂ ಇಂಜಿನಿಯರ್ ಪ್ರಶಾಂತ್ ಶೆಟ್ಟಿ, ವಿವಿಧ ಶಾಖಾಧಿಕಾರಿಗಳಾದ ಮಹೇಶ್, ವೈಭವ್ ಶೆಟ್ಟಿ, ಲೆಕ್ಕಾಧಿಕಾರಿ ಕೆ.ಮಹೇಶ್ ಇದ್ದರು.