ಉಡುಪಿ ಜಿಲ್ಲಾ ಬಿಜೆಪಿ 
ಉಡುಪಿ

ಉಡುಪಿ ಜಿಲ್ಲಾ ಬಿಜೆಪಿಯ ವಿವಿಧ ಪ್ರಕೋಷ್ಠಗಳಿಗೆ ನೇಮಕ

* ಸಂಚಾಲಕರು, ಸಹ ಸಂಚಾಲಕರ ನಿಯುಕ್ತಿ

ಉಡುಪಿ: ಉಡುಪಿ ಜಿಲ್ಲಾ ಬಿಜೆಪಿಯ ವಿವಿಧ ಪ್ರಕೋಷ್ಠಗಳ ಸಂಚಾಲಕರು ಮತ್ತು ಸಹ ಸಂಚಾಲಕರನ್ನು ನೇಮಕ ಮಾಡಲಾಗಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಅನುಮೋದನೆಯ ಮೇರೆಗೆ ಜಿಲ್ಲಾ ಪ್ರಕೋಷ್ಠಗಳ ಸಂಯೋಜಕರಾದ ದಿಲ್ಲೇಶ್​ ಶೆಟ್ಟಿ ಬೆಳ್ಳಂಪಳ್ಳಿ ಮತ್ತು ವಿಜಯ ಕೊಡವೂರು ನಿಯುಕ್ತಿಗೊಳಿಸಿ ಪಟ್ಟಿ ಬಿಡುಗಡೆ ಮಾಡಿದ್ದಾರೆ. 
ಕಾನೂನು ಪ್ರಕೋಷ್ಠದ ಸಂಚಾಲಕ- ಸುದೀಪ್​ ಶೆಟ್ಟಿ ನಿಟ್ಟೆ, ಸಹ ಸಂಚಾಲಕ- ಅಜಿತ್​ ಜೋಗಿ ಯಡ್ತಾಡಿ. ಅಸಂಘಟಿತ ಕಾರ್ಮಿಕರ ಪ್ರಕೋಷ್ಠದ ಸಂಚಾಲಕ- ಗೋಪಾಲ್​ ಕೋಟ್ಯಾನ್​ ತೆಂಕನಿಡಿಯೂರು, ಸಹ ಸಂಚಾಲಕ ಕೃಷ್ಣ ಕುಲಾಲ್​ ವರ್ವಾಡಿ. ನೇಕಾರರ ಪ್ರಕೋಷ್ಠದ ಸಂಚಾಲಕ- ಅವಿನಾಶ್​ ಶೆಟ್ಟಿಗಾರ್​ ಮಾರ್ಪಳ್ಳಿ, ಸಹ ಸಂಚಾಲಕ- ರಾಜಕೇಸರಿ ಶೆಟ್ಟಿಗಾರ್​. ಹಾಲು ಉತ್ಪಾದಕರ ಪ್ರಕೋಷ್ಠದ ಸಂಚಾಲಕ- ಅಶೋಕ್​ ರಾವ್​ ಕಟಪಾಡಿ, ಸಹ ಸಂಚಾಲಕಿ- ರಂಜಿತಾ ಶೆಟ್ಟಿ ಕೆಮ್ತೂರು. ಕೈಗಾರಿಕಾ ಪ್ರಕೋಷ್ಠದ ಸಂಚಾಲಕ- ಸದಾನಂದ ಪ್ರಭು ಪೆರ್ಣಂಕಿಲ, ಸಹ ಸಂಚಾಲಕ& ರವಿ ಆರ್​. ಆಚಾರ್ಯ. ಆರ್ಥಿಕ ಪ್ರಕೋಷ್ಠದ ಸಂಚಾಲಕ- ರಾಜ ಎಂ. ಸಾಲ್ಯಾನ್​, ಸಹ ಸಂಚಾಲಕ- ಸುಧೀರ್​ ಭಟ್​ ನೇಮಕಗೊಂಡಿದ್ದಾರೆ ಎಂದು ಜಿಲ್ಲಾ ಬಿಜೆಪಿ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.