ಬಿಎಂಎಸ್ ಮಂಜೇಶ್ವರ ವಲಯ ಸಮ್ಮೇಳನವನ್ನು ಉಪೇಂದ್ರನ್ ಕೋಟೆಕಣಿ ಉದ್ಘಾಟಿಸಿದರು. ವಲಯಾಧ್ಯಕ್ಷ ರವಿ ಎಂ.ಕೆ. ಕೋಳ್ಯೂರು, ಭಾಸ್ಕರ ಬಿ.ಎಂ., ಶ್ರೀಧರ ಪಿ. ಮೊದಲಾದವರಿದ್ದರು.  
ಉಡುಪಿ

ನೀಟ್ ನೆಪದಲ್ಲಿ ದೇಶ ವಿರೋಧಿ ಪ್ರತಿಭಟನೆ

ಮಂಜೇಶ್ವರ: ನೀಟ್ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಎಷ್ಟು ಮುಖ್ಯವೋ, ಅದೇ ರೀತಿ ಇದನ್ನೇ ನೆಪವಾಗಿಟ್ಟುಕೊಂಡು ಭಾರತಕ್ಕೆ ತೊಂದರೆ ಉಂಟುಮಾಡುವ ದೇಶ ವಿರೋಧಿ ಪ್ರತಿಭಟನೆಗಳು ಹಾಗೂ ಕುಕೃತ್ಯಗಳ ವಿರುದ್ಧ ಎಲ್ಲರೂ ಎಚ್ಚೆತ್ತುಕೊಳ್ಳುವುದು ಕೂಡ ಮುಖ್ಯ ಎಂದು ಬಿಎಂಎಸ್ ಜಿಲ್ಲಾಧ್ಯಕ್ಷ ಉಪೇಂದ್ರನ್ ಕೋಟೆಕಣಿ ಹೇಳಿದರು.
ಹೊಸಂಗಡಿಯಲ್ಲಿ ಬಿಎಂಎಸ್ ಮಂಜೇಶ್ವರ ವಲಯ ಸಮಿತಿಯ ನೇತೃತ್ವದಲ್ಲಿ ವಲಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ವಲಯಾಧ್ಯಕ್ಷ ರವಿ ಎಂ.ಕೆ. ಕೋಳ್ಯೂರು ಅಧ್ಯಕ್ಷತೆ ವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ.ನಾಯರ್, ದಿನೇಶ್ ಬಂಬ್ರಾಣ, ಹರೀಶ್ ಕುದ್ರೆಪಾಡಿ, ಯಶವಂತಿ ಬೆಜ್ಜ ಮಾತನಾಡಿದರು.
ಮಂಜೇಶ್ವರ ವಲಯದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ರವಿ ಎಂ.ಕೆ.ಕೋಳ್ಯೂರು, ಉಪಾಧ್ಯಕ್ಷರಾಗಿ ಭಾಸ್ಕರ ಬಿ.ಎಂ., ಶ್ರೀಧರ ಪಿ., ವನಿತಾ ಜೆ.ನಾಯ್ಕ, ಜಯಲಕ್ಷ್ಮೀ ಚಿಗುರುಪಾದೆ, ಕಾರ್ಯದರ್ಶಿಯಾಗಿ ಕಿಶೋರ್ ಕುಂಜತ್ತೂರ್, ಜತೆ ಕಾರ್ಯದರ್ಶಿಗಳಾಗಿ ರಾಮಚಂದ್ರ ಬಟ್ಟಿಪದವು, ಸುನೀಲ್ ಬಟ್ಟಕಳ, ಪ್ರಫುಲ್ಲ ಕಳಿಯೂರು, ಪ್ರಕಾಶ್ ಹೊಸಂಗಡಿ, ಕೋಶಾಧಿಕಾರಿಯಾಗಿ ಮನೋಜ್ ಬಟ್ಟಿಪದವು, ಸಮಿತಿ ಸದಸ್ಯರಾಗಿ ರವಿ ಮಜಲ್, ರವೀಂದ್ರ ಕುಲಾಲ್, ರೋಹಿತ್ ಬೆಜ್ಜ, ಗೋಪಾಲ ದೈಗೋಳಿ, ಬಾಲಕೃಷ್ಣ ಉಜಿರೆ, ಪ್ರದೀಪ್, ಹರೀಶ್ ದೈಗೋಳಿ ಮತ್ತು ನಳಿನಿ ಹೊಸಂಗಡಿ ಆಯ್ಕೆಯಾದರು. ರವೀಂದ್ರ ಕುಲಾಲ್ ಸ್ವಾಗತಿಸಿ, ಮನೋಜ್ ಬಟ್ಟಿಪದವು ವಂದಿಸಿದರು.