ಉಡುಪಿಯ ತೆಂಕನಿಡಿಯೂರು ಕಾಲೇಜಿನಲ್ಲಿ ಆಯೋಜಿಸಿದ್ದ ಮಾದಕ ಮಾದಕ ವ್ಯಸನ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಅರುಣಕುಮಾರ್​ ಮಾತನಾಡಿದರು. ನಿತ್ಯಾನಂದ ವಿ. ಗಾಂವ್ಕರ್​, ಡಾ. ರೋಶನ್​ ಶೆಟ್ಟಿ, ಕೃಷ್ಣ ಸಾಸ್ತಾನ, ಮರ್ವಿನ್​ ವಿಕ್ಟರ್​ ಡಿಸೋಜ ಇದ್ದರು. 
ಉಡುಪಿ

ಮಾದಕ ವ್ಯಸನಗಳಿಗೆ ಯುವಜನತೆ ಬಲಿ

* ನಿಯಂತ್ರಣಕ್ಕೆ ಶ್ರಮಿಸಲು ಅರುಣಕುಮಾರ್​ ಕರೆ

* ತೆಂಕನಿಡಿಯೂರು ಪದವಿ ಕಾಲೇಜಿನಲ್ಲಿ ಜಾಗೃತಿ 

ಉಡುಪಿ: ಇಂದಿನ ಯುವಜನತೆ ಡ್ರಗ್ಸ್​ ವ್ಯಸನಗಳಿಗೆ ಬಲಿಯಾಗುತ್ತಿದ್ದು ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ, ಸಾಮಾಜಿಕ ಅಪರಾಧಗಳಲ್ಲೂ ತೊಡಗುತ್ತಿದ್ದಾರೆ. ಹೀಗಾಗಿ ಸರ್ಕಾರ, ಆಡಳಿತ ವ್ಯವಸ್ಥೆ, ಸಾರ್ವಜನಿಕರು ಮತ್ತು ಎಲ್ಲ ವಿದ್ಯಾಸಂಸ್ಥೆಗಳು ಒಟ್ಟಾಗಿ ಯುವಜನತೆಯನ್ನು ಮಾದಕ ವ್ಯಸನಗಳಿಂದ ಮುಕ್ತಗೊಳಿಸುವಲ್ಲಿ ಶ್ರಮಿಸುವ ಅಗತ್ಯವಿದೆ ಎಂದು ಮಲ್ಪೆ ಪೊಲೀಸ್​ ಠಾಣಾಧಿಕಾರಿ ಅರುಣಕುಮಾರ್​ ತಿಳಿಸಿದರು.
ಉಡುಪಿಯ ತೆಂಕನಿಡಿಯೂರಿನಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಯುವ ರೆಡ್​ ಕ್ರಾಸ್​ ಘಟಕ, ಐಕ್ಯುಎಸಿ, ಮಾದಕ ದ್ರವ್ಯ ವಿರೋಧಿ ಸಮಿತಿ ಹಾಗೂ ಮಲ್ಪೆ ಪೊಲೀಸ್​ ಠಾಣೆಯ ಸಹಕಾರದಲ್ಲಿ ಆಯೋಜಿಸಿದ್ದ ಮಾದಕ ವ್ಯಸನ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವ್ಕರ್​ ಅಧ್ಯಕ್ಷತೆ ವಹಿಸಿದ್ದರು. ಮಾದಕ ವ್ಯಸನ ತಡೆ ಸಮಿತಿಯ ಸಂಚಾಲಕ ಡಾ. ರೋಶನ್​ ಶೆಟ್ಟಿ, ಸದಸ್ಯರಾದ ಕೃಷ್ಣ ಸಾಸ್ತಾನ, ಮರ್ವಿನ್​ ವಿಕ್ಟರ್​ ಡಿಸೋಜ ಉಪಸ್ಥಿತರಿದ್ದರು.  
ಮಾದಕ ವ್ಯಸನ ತಡೆ ಸಮಿತಿ ವಿದ್ಯಾರ್ಥಿ ಸದಸ್ಯರು ಪಾಲ್ಗೊಂಡಿದ್ದರು. ವಿವಿಧ ಮಾದಕ ದ್ರವ್ಯಗಳು, ಸೇವನೆಯಿಂದಾಗುವ ಹಾನಿ, ಮಾದಕ ದ್ರವ್ಯ ಸಾಗಾಟ ತಡೆಗೆ ಇರುವ ಕಾನೂನು, ಸೇವನೆ ಹಾಗೂ ಮಾರಾಟ ಮಾಡಿದರೆ ಇರುವ ಶಿಕ್ಷೆಯ ಪ್ರಮಾಣದ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.
ಯುವ ರೆಡ್​ ಕ್ರಾಸ್​ ಟಕದ ಸಂಚಾಲಕ ಪ್ರಶಾಂತ್​ ನೀಲಾವರ ಕಾರ್ಯಕ್ರಮ ನಿರ್ವಹಿಸಿದರು.