ಬೆಳುವಾಯಿ ಫ್ಲೈಓವರ್‌ನಲ್ಲಿ ಕಾರು ಸ್ಕಿಡ್ ಆಗಿ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. 
ಉಡುಪಿ

ಬೆಳುವಾಯಿ ಫ್ಲೈಓವರ್‌ನಲ್ಲಿ ಮತ್ತೆ ಅಪಘಾತ

ಇಂದಿರಾ ಎನ್ ಕೆ
ಮೂಡುಬಿದಿರೆ: ಬೆಳುವಾಯಿ ಫ್ಲೈಓವರ್‌ನಲ್ಲಿ ರಸ್ತೆ ದೋಷದಿಂದಾಗಿ ಶುಕ್ರವಾರ ಮತ್ತೊಂದು ಅಪಘಾತ ಸಂಭವಿಸಿದ್ದು, ಕಳೆದ ಎರಡು ವಾರಗಳಲ್ಲಿ ಇದೇ ಸ್ಥಳದಲ್ಲಿ ಸಂಭವಿಸಿದ ಮೂರನೇ ಅಪಘಾತ ಇದಾಗಿದೆ.
ಮಳೆ ನೀರು ನಿಲ್ಲುವುದರಿಂದ ಕಾರು ಸ್ಕಿಡ್ ಆಗಿ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದು, ಸುರಕ್ಷತಾ ಏರ್‌ಬ್ಯಾಗ್‌ಗಳು ತೆರೆದುಕೊಂಡ ಪರಿಣಾಮ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸೂಕ್ತ ಚರಂಡಿ ವ್ಯವಸ್ಥೆ ಹಾಗೂ ಎಚ್ಚರಿಕೆ ಫಲಕಗಳ ಕೊರತೆಯೇ ಸರಣಿ ಅಪಘಾತಗಳಿಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಕ್ಷಣ ಶಾಶ್ವತ ಪರಿಹಾರ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.