ಉಡುಪಿಯಲ್ಲಿ ಕಿನ್ನಿಮೂಲ್ಕಿ-ಕನ್ನರ್ಪಾಡಿ ಬ್ರಾಹ್ಮಣ ಸಂಘದ ವಾರ್ಷಿಕ ಸಭೆಯಲ್ಲಿ ಸಮಾಜದ ಹಿರಿಯ ದಂಪತಿಯನ್ನು ಸನ್ಮಾನಿಸಿಲಾಯಿತು. ಸಂದೀಪ್ ಮಂಜ, ಎಂ.ಎನ್. ರಾಜೇಂದ್ರ, ಶ್ರೀಕಾಂತ್ ಉಪಾಧ್ಯಾಯ, ಡಾ. ಸೀತಾರಾಮ ಆಚಾರ್ಯ, ರಮೇಶ್ ರಾವ್ ಬೀಡು, ಡಾ. ಉಷಾ ಚಡಗ, ಕೆ.ವಿ. ಆಚಾರ್ಯ, ಜನಾರ್ದನ್ ಭಟ್, ಮಂಚಿ ಸುರೇಶ್ ರಾವ್, ಸುದರ್ಶನ್ ಆಚಾರ್ಯ ಇದ್ದರು.
* ಜಿಲ್ಲಾಧ್ಯಕ್ಷ ಸಂದೀಪ್ ಮಂಜ ಅಭಿಪ್ರಾಯ
* ಕಿನ್ನಿಮೂಲ್ಕಿ-ಕನ್ನರ್ಪಾಡಿ ಸಂಘದ ವಾರ್ಷಿಕ ಸಭೆ
ಉಡುಪಿ: ಪ್ರಸ್ತುತ ಸ್ಥಿತಿಗತಿ ಅವಲೋಕಿಸಿದಾಗ ಮುಂದಿನ ದಿನಗಳಲ್ಲಿ ಬ್ರಾಹ್ಮಣ್ಯ ಅಳಿಯುವ ಭೀತಿ ಇದೆ. ಈ ನಿಟ್ಟಿನಲ್ಲಿ ಬ್ರಾಹ್ಮಣ ಸಂಸ್ಕೃತಿಯ ರಕ್ಷಣೆಗೆ ಈಗಿನಿಂದಲೇ ಕಾರ್ಯಪ್ರವೃತ್ತರಾಗುವ ಅಗತ್ಯತೆ ಇದೆ. ಮುಖ್ಯವಾಗಿ ನಮ್ಮ ಮಕ್ಕಳಲ್ಲಿ ನಮ್ಮತನದ ಬಗ್ಗೆ ಆಸಕ್ತಿ ಮೂಡಿಸಿ, ಅದನ್ನು ಅನುಸರಿಸುವಂತೆ ಪ್ರೇರೇಪಿಸಬೇಕು. ಸಂಸ್ಕೃತಿ-ಸಂಸ್ಕಾರಗಳ ಪಾಠ ನಮ್ಮ ಮನೆಯಿಂದಲೇ ಆರಂಭವಾಗಬೇಕು ಎಂದು ಉಡುಪಿ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಸಂದೀಪ್ ಮಂಜ ಅಭಿಪ್ರಾಯಪಟ್ಟರು.
ಉಡುಪಿಯ ಕಿನ್ನಿಮೂಲ್ಕಿಯಲ್ಲಿರುವ ಶ್ರೀದೇವಿ ಸಭಾಭವನದಲ್ಲಿ ಕಿನ್ನಿಮೂಲ್ಕಿ-ಕನ್ನರ್ಪಾಡಿ ಬ್ರಾಹ್ಮಣ ಸಂಘದ ವತಿಯಿಂದ ಆಯೋಜಿಸಿದ್ದ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಸನ್ಮಾನ
ದಿವ್ಯಾಂಗರಾಗಿದ್ದರೂ ಸಾಧನೆಗೈದ ಹರೀಶ್ ಭಟ್ ಅವರನ್ನು ಸನ್ಮಾನಿಸಲಾಯಿತು. ದಾಂಪತ್ಯ ಜೀವನದಲ್ಲಿ ಸುವರ್ಣ ಮಹೋತ್ಸವ ಕಂಡ ಹತ್ತು ದಂಪತಿಯನ್ನು ಗೌರವಿಸಲಾಯಿತು. ಉಡುಪಿ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀಕಾಂತ್ ಉಪಾಧ್ಯಾಯ, ಕಾಪು ದಂಡತೀರ್ಥ ಡಾ. ಸೀತಾರಾಮ ಆಚಾರ್ಯ, ರಮೇಶ್ ರಾವ್ ಬೀಡು ಉಪಸ್ಥಿತರಿದ್ದರು.
ಮಹಿಳಾ ವಲಯದ ಅಧ್ಯಕ್ಷೆ ಡಾ. ಉಷಾ ಚಡಗ, ಕೆ.ವಿ. ಆಚಾರ್ಯ, ಜನಾರ್ದನ್ ಭಟ್, ಮುರಳಿ ಕೃಷ್ಣ ಭಟ್, ವಿಜಯಲಕ್ಷ್ಮೀ ಕಿರಣ್, ಬೃಂದಾ ರಾಜೇಂದ್ರ ಹಾಗೂ ಪದಾಧಿಕಾರಿಗಳು, ಸಮಾಜ ಬಾಂಧವರು ಪಾಲ್ಗೊಂಡಿದ್ದರು.
ಸಂಘದ ಅಧ್ಯಕ್ಷ ಎಂ.ಎನ್. ರಾಜೇಂದ್ರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತಾಡಿದರು. ಕಾರ್ಯದರ್ಶಿ ಮಂಚಿ ಸುರೇಶ್ ರಾವ್ ವಾರ್ಷಿಕ ವರದಿ ವಾಚಿಸಿದರು. ಸುದರ್ಶನ್ ಆಚಾರ್ಯ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಹಿರಿಯ ಪತ್ರಕರ್ತ ಕಿರಣ್ ಮಂಜನಬೈಲ್ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಘದ ಸದಸ್ಯರಿಂದ ಮನರಂಜನಾ ಕಾರ್ಯಕ್ರಮ ನಡೆಯಿತು.