ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಉದ್ಯಮಿ ಆನಂದ ಎನ್.ಶೆಟ್ಟಿ ಪನೆಕ್ಕರ ಬೆಳಗಾವಿ ಉದ್ಘಾಟಿಸಿದರು. ಸುರೇಶ್ ಶೆಟ್ಟಿ ಅಂಬಡ್ಕ, ರವೀಂದ್ರ ದರ್ಬೆ ಮೊದಲಾದವರಿದ್ದರು.
ಬೆಳ್ತಂಗಡಿ: ಬಂಟರ ಯಾನೆ ನಾಡವರ ಸಂಘ ಕಣಿಯೂರು ಗ್ರಾಮ ಸಮಿತಿಯ ವಾರ್ಷಿಕ ಮಹಾಸಭೆ ಹಾಗೂ ಕಣಿಯೂರು ಗ್ರಾಮದ ಬಂಟ ಸಮಾಜದ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ, ಸನ್ಮಾನ ಮತ್ತು ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಪದ್ಮುಂಜ ರೈತ ಸಭಾಭವನದಲ್ಲಿ ನಡೆಯಿತು.
ಉದ್ಯಮಿ ಆನಂದ ಎನ್.ಶೆಟ್ಟಿ ಪನೆಕ್ಕರ ಬೆಳಗಾವಿ ಕಾರ್ಯಕ್ರಮ ಉದ್ಘಾಟಿಸಿದರು. ಬಂಟರ ಯಾನೆ ನಾಡವರ ಸಂಘ ಕಣಿಯೂರು ಗ್ರಾಮ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಅಂಬಡ್ಕ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ವಕ್ತಾರರಾಗಿ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ರವೀಂದ್ರ ದರ್ಬೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ವಿಜಯ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಅಜಿತ್ ಶೆಟ್ಟಿ ಕೊರ್ಯಾರು, ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ, ಕಣಿಯೂರು ವಲಯ ಅಧ್ಯಕ್ಷ ಜಗದೀಶ್ ಶೆಟ್ಟಿ ಮೈರ, ಅನಸೂಯಾ ಶಂಭು ರೈ ಮೊರಂತಾಜೆ, ಕಣಿಯೂರು ಗ್ರಾಮ ಸಮಿತಿ ಗೌರವಾಧ್ಯಕ್ಷ ಉದಯ ಕುಮಾರ್ ಮೇಲಾಂಟ, ಬೆಳ್ತಂಗಡಿ ಬಂಟರ ಸಂಘದ ನಿರ್ದೇಶಕ ಪುರಂದರ ಶೆಟ್ಟಿ ಪಣೆಕ್ಕರ, ಕಣಿಯೂರು ಗ್ರಾಮ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸನ್ಮಾನ
ಉದ್ಯಮಿ ಆನಂದ ಎನ್.ಶೆಟ್ಟಿ ಪಣೆಕ್ಕರ, ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಸುಜಾತಾ ಶೆಟ್ಟಿ ಮೊಗರೋಡಿ, ಸಿಎ ರಕ್ಷಿತ್ ಶೆಟ್ಟಿ ಅಂತರ, ಎಸ್‌ಕೆಡಿಆರ್‌ಡಿಪಿ ಪ್ರಾದೇಶಿಕ ನಿರ್ದೇಶಕಿ ದಯಾಶೀಲಾ ಆಳ್ವ ಹಾಗೂ ಪದ್ಮುಂಜ ಮಿಲ್ಕ್ ಸೊಸೈಟಿ ಕಾರ್ಯದರ್ಶಿಯಾಗಿ ಆಯ್ಕೆಯಾದ ಸತೀಶ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾ ಕ್ಷೇತ್ರದ ಸಾಧನೆಗಾಗಿ ವಿಲಾಸ್ ಶೆಟ್ಟಿ ಪುಣ್ಕೆದಡಿ ಅವರನ್ನು ಸನ್ಮಾನಿಸಲಾಯಿತು.
ಕಣಿಯೂರು ಗ್ರಾಮ ಸಮಿತಿ ಕಾರ್ಯದರ್ಶಿ ಜಯರಾಮ್ ಶೆಟ್ಟಿ ಕೆರೆಕೋಡಿ ವರದಿ ವಾಚಿಸಿದರು. ಯತೀಶ್ ಶೆಟ್ಟಿ ಪಣೆಕ್ಕರ ಕಾರ್ಯಕ್ರಮ ನಿರೂಪಿಸಿದರು.