ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವದಲ್ಲಿ ಗಂಪದಬೈಲು ಜಯರಾಮ ಪ್ರಭು ಮಾತನಾಡಿದರು. ಪ್ರಮುಖರಾದ ಟೋನಿ ಮೋನಿಸ್, ತೆರೆಜಾ ಫೆಲಿಕ್ಸ್ ಮಾರ್ಟಿಸ್, ಸುಂದರ ಪಾಟ್ಕರ್ ಪೊದಮಲೆ, ಮಾಧವ ಕಾಮತ್, ಶಶಿಧರ ವಾಗ್ಲೆ, ರವೀಂದ್ರ ಪಾಟ್ಕರ್, ನವೀನ್, ರಿತಿಕ್, ಸಂಗೀತಾ ಆರ್.ಪಾಟ್ಕರ್ ಉಪಸ್ಥಿತರಿದ್ದರು.
ಶಿರ್ವ: ನಾಲ್ಕು ವರ್ಷಗಳಿಂದ ಸರ್ಕಾರದ ವತಿಯಿಂದ ಅಧಿಕೃತ ಶಿಕ್ಷಕರಿಲ್ಲದೆ ಗೌರವ ಶಿಕ್ಷಕಿಯರನ್ನು ಇಟ್ಟುಕೊಂಡು ಶಾಲೆ ನಡೆಸುತ್ತಿದ್ದೇವೆ. ಶಾಲಾ ವಾರ್ಷಿಕೋತ್ಸವ ನಡೆಸಲು ಅಸಾಧ್ಯವಾಗಿದ್ದು, ಶತಮಾನೋತ್ಸವದ ಶುಭಾವಸರದಲ್ಲಿ ಶಾಲಾ ಹಳೇ ವಿದ್ಯಾರ್ಥಿಗಳ ಸಹಕಾರ ಹಾಗೂ ಶಾಲಾ ಶತಮಾನೋತ್ಸವ ಸಮಿತಿ ಜತೆಗೂಡಿ ವಾರ್ಷಿಕೋತ್ಸವ ನಡೆಸುತ್ತಿದ್ದೇವೆ. ವಿದ್ಯಾರ್ಥಿಗಳ ಸ್ವಪ್ರತಿಭೆಗಳ ವಿಕಸನಕ್ಕೆ ಶಾಲಾ ವಾರ್ಷಿಕೋತ್ಸವಗಳು ವೇದಿಕೆ ಎಂದು ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಗಂಪದಬೈಲು ಜಯರಾಮ ಪ್ರಭು ಹೇಳಿದರು.
ನೂರು ಸಂವತ್ಸರ ಪೂರೈಸಿದ ಶ್ರೀಕ್ಷೇತ್ರ ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಆಡಳಿತಕ್ಕೆ ಒಳಪಟ್ಟ ಶ್ರೀ ದುರ್ಗಾಪರಮೇಶ್ವರೀ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಸಮಾರಂಭಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಬಂಟಕಲ್ಲು ಬಿ.ಸಿ.ರೋಡ್ ಲಯನ್ಸ್ ಕ್ಲಬ್ ಅಧ್ಯಕ್ಷ, ಶಾಲಾ ಹಳೇ ವಿದ್ಯಾರ್ಥಿ ಟೋನಿ ಮೋನಿಸ್ ಶುಭ ಹಾರೈಸಿದರು. ದಾನಿಗಳಾದ ತೆರೆಜಾ ಫೆಲಿಕ್ಸ್ ಮಾರ್ಟಿಸ್, ಸುಂದರ ಪಾಟ್ಕರ್ ಪೊದಮಲೆ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್, ಆಡಳಿತ ಮಂಡಳಿ ಅಧ್ಯಕ್ಷ ಶಶಿಧರ ವಾಗ್ಲೆ, ಎಸ್‌ಡಿಎಂಸಿ ಅಧ್ಯಕ್ಷ ರವೀಂದ್ರ ಪಾಟ್ಕರ್, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ನವೀನ್, ಶಾಲಾ ನಾಯಕ ರಿತಿಕ್, ಮುಖ್ಯಶಿಕ್ಷಕಿ ಸಂಗೀತಾ ಆರ್.ಪಾಟ್ಕರ್ ಉಪಸ್ಥಿತರಿದ್ದರು. ಸಂಚಾಲಕ ರಾಮದಾಸ್ ಪ್ರಭು ಸ್ವಾಗತಿಸಿದರು. ಹಳೇ ವಿದ್ಯಾರ್ಥಿ ದೇವದಾಸ್ ಪಾಟ್ಕರ್ ನಿರೂಪಿಸಿದರು.