ಉಡುಪಿ ಪರ್ಕಳದ ಅರ್ಜುನ ಯುವಕ ಮಂಡಳದ ವಾರ್ಷಿಕೋತ್ಸವದ ನಿಮಿತ್ತ ಸಾಧಕರನ್ನು ಸನ್ಮಾನಿಸಲಾಯಿತು. ದಿಲೀಪ್ರಾಜ್ ಹೆಗ್ಡೆ, ಅರುಣಾ ಸದನಾಂದ ಶೆಟ್ಟಿಗಾರ್, ವಾಣಿ ಗಣೇಶ್ ಪಾಟೀಲ್, ಜಯ, ಗೌತಮ್, ಪ್ರಸನ್ನ ಶೆಟ್ಟಿ ಇತರರಿದ್ದರು.
* ಸಾಧಕರಿಗೆ ಸನ್ಮಾನ, ವಿಜೇತರಿಗೆ ಬಹುಮಾನ
ಉಡುಪಿ: ಪರ್ಕಳ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ಮತ್ತು ಶ್ರೀ ಮಹಿಷಮರ್ಧೀನಿ ದೇವಸ್ಥಾನದ ರಥೋತ್ಸವದ ನಿಮಿತ್ತ ಪರ್ಕಳದ ಅರ್ಜುನ ಯುವಕ ಮಂಡಳದ 64ನೇ ವಾರ್ಷಿಕೋತ್ಸವ ಹಾಗೂ ಬೊಳ್ಜಿಕಟ್ಟೆ ಫ್ರೆಂಡ್ಸ್ ಪರ್ಕಳದ ಸಹಕಾರದಲ್ಲಿ ಬೊಳ್ಜಿಕಟ್ಟೆ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನಿರಂಜನ ಚೆನ್ನದಾಸರ್, ಛಾಯಾ ಪೂಜಾರಿ ಹಾಗೂ ರಾಜೇಶ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಸಂಘದ ಗೌರವ ಸಲಹೆಗಾರ ದಿಲೀಪ್ರಾಜ್ ಹೆಗ್ಡೆ, ಅರುಣಾ ಸದನಾಂದ ಶೆಟ್ಟಿಗಾರ್, ವಾಣಿ ಗಣೇಶ್ ಪಾಟೀಲ್, ಅಧ್ಯಕ್ಷ ಜಯ, ಕಾರ್ಯದರ್ಶಿ ಗೌತಮ್, ಕೋಶಾಧಿಕಾರಿ ಪ್ರಸನ್ನ ಶೆಟ್ಟಿ ಹಾಗೂ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಂಘದ ಸದಸ್ಯರಿಗೆ ಆಯೋಜಿಸಿದ್ದ ಪುರುಷರು ಹಾಗೂ ಬಾಲಕರ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹರಿದಾಸ ಗಣೇಶ್ ಪಾಟೀಲ್ ಪರ್ಕಳ ಮತ್ತು ತಂಡದಿಂದ ಹರಿಕಥಾಸತ್ಸಂಗ, ಸಂಘದ ಸದಸ್ಯ ಸುಕೇಶ್ ಕುಂದರ್ ನೇತೃತ್ವದಲ್ಲಿ ಹಾಗೂ ಅತಿಥಿ ಕಲಾವಿದರಿಂದ "ಇನಿ ಆತ್ತ್ಂಡ ಎಲ್ಲೆ' ಎಂಬ ಹಾಸ್ಯಮಯ ತುಳು ನಾಟಕ ನಡೆಯಿತು.