ಉಡುಪಿಯ ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಸಾಧಕ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು. ಯಶ್ಪಾಲ್ ಸುವರ್ಣ, ಕಿಶೋರ್ ಆಳ್ವ, ಶ್ಯಾಮಿಲಿ ನವೀನ್, ಪ್ರೊ. ಸೋಜನ್ ಕೆ.ಜಿ., ಕೃಷ್ಣ ಭಟ್, ಡಾ. ನಿಕೇತನಾ, ಡಾ. ಶ್ರೀಮತಿ ಅಡಿಗ, ಡಾ. ರಾಮಚಂದ್ರ ಪಾಟ್ಕರ್, ಡಾ. ರಾಜೇಂದ್ರ ಕೆ. ಇತರರಿದ್ದರು.
* ಶಿಕ್ಷಕರಿಗೆ ಶಾಸಕ ಯಶ್ಪಾಲ್ ಸುವರ್ಣ ಕಿವಿಮಾತು
* ಡಾ.ಜಿ.ಶಂಕರ್ ಮಹಿಳಾ ಕಾಲೇಜಿನಲ್ಲಿ ವಾರ್ಷಿಕೋತ್ಸವ
ಉಡುಪಿ: ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲು ತರಗತಿಯೊಳಗೆ ಗುಣಮಟ್ಟದ ಶಿಕ್ಷಣ ಹಾಗೂ ತರಗತಿಯ ಹೊರಗೆ ಅವರನ್ನು ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಪಾಳ್ಗೊಳ್ಳುವಂತೆ ಹುರಿದುಂಬಿಸಬೇಕು. ಕಲಿಕೆಯ ಅವಧಿಯಲ್ಲಿಯೇ ಜೀವನ ಮೌಲ್ಯ, ಕಲೆ ಮತ್ತು ನಮ್ಮ ಸಂಸ್ಕೃತಿಗಳ ವಿಚಾರಗಳನ್ನೂ ತಿಳಿಸಿ ಸದ್ಗುಣಗಳ ನಾಗರಿಕರನ್ನಾಗಿ ಬೆಳೆಸಬೇಕು. ಈ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಅತಿಮುಖ್ಯ ಎಂದು ಉಡುಪಿ ಶಾಸಕ ಹಾಗೂ ಕಾಲೇಜು ಅಭಿವದ್ಧಿ ಸಮಿತಿ ಅಧ್ಯಕ್ಷ ಯಶ್ಪಾಲ್ ಸುವರ್ಣ ಅಭಿಪ್ರಾಯಪಟ್ಟರು.
ಉಡುಪಿಯ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಅಜ್ಜರಕಾಡಿನ ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು.
ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಕಾಲೇಜು ವಾರ್ಷಿಕೋತ್ಸವದಲ್ಲಿ ಯಶ್ಪಾಲ್ ಸುವರ್ಣ ಮಾತನಾಡಿದರು.
ಅದಾನಿ ಗ್ರೂಪ್ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮಾತನಾಡಿ, ವಿದ್ಯಾರ್ಥಿಗಳು ಸೃಜನಶೀಲ ಗುಣ ಬೆಳೆಸಿಕೊಳಬೇಕು ಎಂದು ಕಿವಿಮಾತು ಹೇಳಿದರು. ನಾಡೋಜ ಡಾ. ಜಿ.ಶಂಕರ್ ಅವರ ಪುತ್ರಿ ಶ್ಯಾಮಿಲಿ ನವೀನ್, ವಿದ್ಯಾರ್ಥಿನಿಯರಿಗೆ ಶುಭಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಸೋಜನ್ ಕೆ.ಜಿ. ವಾರ್ಷಿಕ ವರದಿ ಮಂಡಿಸಿದರು. ಕ್ರೀಡೆ, ರೇಂಜರ್ಸ್ ಮತ್ತು ಎನ್ಸಿಸಿಯಲ್ಲಿ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರನ್ನು ಸಮ್ಮಾನಿಸಲಾಯಿತು.
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೃಷ್ಣ ಭಟ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ನಿಕೇತನಾ, ಐಕ್ಯುಎಸಿ ಸಂಚಾಲಕಿ ಡಾ. ಶ್ರೀಮತಿ ಅಡಿಗ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಮಚಂದ್ರ ಪಾಟ್ಕರ್, ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಾದ ಕೀರ್ತಿ ಶೆಟ್ಟಿ, ಸುಮನಾ, ಸ್ವೀಕೃತಿ ರಾವ್, ಶರಣಾ, ಉಷಾ ಮತ್ತು ಸುಚಿತಾ ಉಪಸ್ಥಿತರಿದ್ದರು.
ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಡಾ. ರಾಜೇಂದ್ರ ಕೆ. ಸ್ವಾಗತಿಸಿದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಮಂಜುನಾಥ್ ವಂದಿಸಿದರು. ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶರತ್ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
"
ವಿದ್ಯಾರ್ಥಿ ಜೀವನದಲ್ಲಿಯೇ ಸಮಾಜ ಸೇವೆಯ ಮಾನವೀಯ ಗುಣ ಅಳವಡಿಸಿಕೊಳ್ಳಬೇಕು. ನಮ್ಮ ನೆಲ-ಜಲ, ಸಂಸ್ಕೃತಿ ಹಾಗೂ ಪರಂಪರೆಯ ರಕ್ಷಣೆಯೊಂದಿಗೆ ರಾಷ್ಟ್ರೀಯತೆ ಮೈಗೂಡಿಸಿಕೊಳ್ಳಬೇಕು. ತನ್ಮೂಲಕ ಹೆತ್ತವರಿಗೂ, ಕಾಲೇಜಿಗೂ ಕೀರ್ತಿ ತರಬೇಕು.
— ಯಶ್ಪಾಲ್ ಸುವರ್ಣ. ಉಡುಪಿ ಶಾಸಕ.