ಉಡುಪಿ: ಅಂಗನವಾಡಿ ಶಿಕ್ಷಕಿಯರ ಸಾಮಾಜಿಕ ಸೇವಾಕಾರ್ಯ ಅರ್ಥಪೂರ್ಣ. ಪ್ರಧಾನಿ ನರೇಂದ್ರ ಮೋದಿ ಅವರ ಆಶಯದಂತೆ ಮಕ್ಕಳ ಪೌಷ್ಟಿಕತೆ, ಆರೋಗ್ಯ, ಪೂರ್ವ ಪ್ರಾಥಮಿಕ ಶಿಕ್ಷಣದ ಜತೆಗೆ ಗರ್ಭಿಣಿ ಹಾಗೂ ಬಾಣಂತಿಯರ ಆರೈಕೆಯಲ್ಲೂ ವಿಶೇಷ ಕೊಡುಗೆ ನೀಡುತ್ತಿದ್ದಾರೆ. ಅವರಿಗೂ ಸರ್ಕಾರಿ ಉದ್ಯೋಗದ ಎಲ್ಲ ಸೌಲಭ್ಯ ಲಭಸಿಬೇಕಿದ್ದು, ಈ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡುವುದಾಗಿ ಶಾಸಕ ಯಶ್ಪಾಲ್ ಸುವರ್ಣ ಭರವಸೆ ನೀಡಿದರು.
ಉಡುಪಿಯ ನಿತ್ಯಾನಂದ ಮಂದಿರದ ಸಭಾಂಗಣದಲ್ಲಿ ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಸೋಮವಾರ (ಅ.5) ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷದ ರಾಷ್ಟ್ರಸೇವೆಯ ಸೇವಾ ಸಂಕಲ್ಪ ಅಭಿಯಾನದಡಿ ನಗರ ವ್ಯಾಪ್ತಿಯ 115 ಅಂಗನವಾಡಿ ಕೇಂದ್ರದ ಶಿಕ್ಷಕಿ ಹಾಗೂ ಸಹಾಯಕಿಯರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು, ಪಕ್ಷದ ಪ್ರಮುಖರಾದ ಸಂಧ್ಯಾ ರಮೇಶ್, ಶಿಲ್ಪಾ ಜಿ. ಸುವರ್ಣ, ಕಿರಣಕುಮಾರ್ ಬೈಲೂರು, ಪ್ರಭಾಕರ್ ಪೂಜಾರಿ, ಶ್ರೀಕಾಂತ ನಾಯಕ್ ಅಲೆವೂರು, ರೇಷ್ಮಾ ಉದಯ್ ಶೆಟ್ಟಿ, ಶ್ಯಾಮಲಾ ಕುಂದರ್, ಉಡುಪಿ ನಗರ ಬಿಜೆಪಿ ಹಾಗೂ ಮಹಿಳಾ ಮೋರ್ಚಾ ಪದಾಧಿಕಾರಿಗಳು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.