hanging 
ಉಡುಪಿ

ಅಂಗನವಾಡಿಯಲ್ಲೇ ಸಹಾಯಕಿ ಆತ್ಮಹತ್ಯೆ

ಇಂದಿರಾ ಎನ್ ಕೆ
ಕುಂದಾಪುರ: ನೆಂಪು ಅಂಗನವಾಡಿ ಕೇಂದ್ರದಲ್ಲಿ 3 ವರ್ಷಗಳಿಂದ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದ ಅಶ್ವಿನಿ(29) ಅಂಗನವಾಡಿಯ ಅಡುಗೆ ಕೋಣೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಾಗೂರು ನಿವಾಸಿ ಅಶ್ವಿನಿ ಬುಧವಾರ ಬೆಳಗ್ಗೆ ಅಂಗನವಾಡಿ ಕೆಲಸಕ್ಕೆ ಬಂದಿದ್ದು, ಮಧ್ಯಾಹ್ನ ಅಂಗನವಾಡಿ ಕಾರ್ಯಕರ್ತೆ ಅವರ ಬಳಿ ಅಂಗನವಾಡಿಗೆ ಬೀಗ ಹಾಕಿ ಮನೆಗೆ ಹೋಗುವಂತೆ ತಿಳಿಸಿ ಮನೆಗೆ ತೆರಳಿದ್ದರು. ಅಂಗನವಾಡಿ ಕಾರ್ಯಕರ್ತೆಯ ಮಗುವಿನ ಆಟಿಕೆ ಅಂಗನವಾಡಿಯಲ್ಲಿ ಬಿಟ್ಟು ಹೋಗಿದ್ದು, ಅದನ್ನು ತೆಗೆದುಕೊಂಡು ಹೋಗಲು ಪುನಃ ಸಂಜೆ ಅಂಗನವಾಡಿಗೆ ಬಂದು ನೋಡುವಾಗ ಅಂಗನವಾಡಿಯ ಬಾಗಿಲಿನ ಒಳಗಿನ ಚಿಲಕ ಹಾಕಿಕೊಂಡಿದ್ದು ಕರೆದರೂ ಮಾತನಾಡುತ್ತಿರಲಿಲ್ಲ.
ಅಶ್ವಿನಿ ಮೊಬೈಲ್ ಸ್ವಿಚ್ಡ್ ಆಫ್ ಇದ್ದು, ಅಂಗನವಾಡಿ ಹಿಂಬದಿಯ ಕಿಟಕಿಯಿಂದ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.