ಪವನ್ ಕಲ್ಯಾಣ್  
ಉಡುಪಿ

ಡಿ.7 ರಂದು ಕೃಷ್ಣ ಮಠಕ್ಕೆ ಪವನ್ ಕಲ್ಯಾಣ್

ಗೋಪಾಲಕೃಷ್ಣ ಪಾದೂರ್

ಉಡುಪಿ: ಪುತ್ತಿಗೆ ಮಠ ಆಶ್ರಯದಲ್ಲಿ ಕೃಷ್ಣಮಠ ರಾಜಾಂಗಣದಲ್ಲಿ ನಡೆಯುತ್ತಿರುವ ಬೃಹತ್ ಗೀತೋತ್ಸವದ ಸಮಾರೋಪ ಸಮಾರಂಭ ಡಿ.7ರಂದು ಅಪರಾಹ್ನ 4 ಗಂಟೆಗೆ ನಡೆಯಲಿದ್ದು, ಮುಖ್ಯ ಅಭ್ಯಾಗತರಾಗಿ ಆಂಧ್ರಪ್ರದೇಶ ಸರ್ಕಾರದ ಉಪಮುಖ್ಯಮಂತ್ರಿ ಹಾಗೂ ಪರಿಸರ, ಅರಣ್ಯ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಸಚಿವ ಪವನ್ ಕಲ್ಯಾಣ್ ಆಗಮಿಸಲಿದ್ದಾರೆ ಎಂದು ಪರ್ಯಾಯ ಪುತ್ತಿಗೆ ಮಠದ ದಿವಾನ್ ನಾಗರಾಜ ಆಚಾರ್ಯ ಮತ್ತು ಕಾರ್ಯದರ್ಶಿ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ.

ನ.8ರಂದು ಉದ್ಘಾಟನಗೊಂಡ ಬೃಹತ್ ಗೀತೋತ್ಸವ ಒಂದು ತಿಂಗಳ ಪರ್ಯಂತ ವಿವಿಧ ಕಾರ್ಯಕ್ರ‌ಮಗಳೊಂದಿಗೆ ನಡೆದಿದ್ದು, ಲಕ್ಷಕಂಠ ಗೀತಾ ಪಾರಾಯಣ ‌ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಿರುವುದನ್ನು ಸ್ಮರಿಸಬಹುದು ಎಂದು ತಿಳಿಸಿದ್ದಾರೆ.