ಸೌದಿ ಅರೇಬಿಯಾ ಬಿಲ್ಲವ ಅಸೋಸಿಯೇಷನ್ ವತಿಯಿಂದ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಶಾಸಕ ಉಮಾನಾಥ ಕೋಟ್ಯಾನ್, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಕೋಶಾಧಿಕಾರಿ ಪದ್ಮರಾಜ್ ಆರ್ ಮತ್ತಿತರರಿದ್ದರು.  
ಉಡುಪಿ

ಸಹಾಯದ ಮನೋವೃತ್ತಿಯಿಂದ ಆದರ್ಶ ವ್ಯಕ್ತಿ

ಮೂಲ್ಕಿ: ಜೀವನದಲ್ಲಿ ಸಹಾಯ ಮಾಡುವ ಮನೋವೃತ್ತಿ ಬೆಳೆಸಿಕೊಂಡರೆ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಲು ಸಾಧ್ಯ. ವಿದ್ಯಾರ್ಥಿಗಳು ಸಹಾಯವನ್ನು ಸದ್ವಿನಿಯೋಗ ಪಡಿಸಿಕೊಳ್ಳಿ ಎಂದು ಬೆಂಗಳೂರು ಆರ್ಯ ಈಡಿಗ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹೇಳಿದರು.

ಸೌದಿ ಅರೇಬಿಯಾ ಬಿಲ್ಲವ ಅಸೋಸಿಯೇಷನ್ ವತಿಯಿಂದ ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಜಯ ಸಿ. ಸುವರ್ಣ ಸಭಾಭವನದಲ್ಲಿ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದರು. ಸಾಧಕರ ನೆಲೆಯಲ್ಲಿ ಉದ್ಯಮಿ ಶೈಲೇಂದ್ರ ವೈ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ಶಾಸಕ ಉಮಾನಾಥ ಕೋಟ್ಯಾನ್, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ಸೂರ್ಯಕಾಂತ ಜಯ ಸುವರ್ಣ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಕೋಶಾಧಿಕಾರಿ ಪದ್ಮರಾಜ್ ಆರ್, ಸಮಾಜಸೇವಕಿ ಗೀತಾಂಜಲಿ ಸುವರ್ಣ ಉಡುಪಿ, ಉದ್ಯಮಿ ಸುಧಾಕರ ಎಂ.ಪೂಜಾರಿ ಕಾರ್ಕಳ, ಸೌದಿ ಅರೇಬಿಯಾ ಬಿಲ್ಲವರ ಅಸೋಸಿಯೇಷನ್ ಅಧ್ಯಕ್ಷ ಕಿಶೋರ್ ಪೂಜಾರಿ, ಗೌರವಾಧ್ಯಕ್ಷ ಕೆಸಿ ಭಾಸ್ಕರ್, ಹೇಮರಾಜ್, ಉಪಾಧ್ಯಕ್ಷ ಗಿರೀಶ್ ಪೂಜಾರಿ ಸುಮಿತ್ರಾ ಭಾಸ್ಕರ್ ಕೊಲ್ಲೂರು, ಜಯಕರ ಎಂ ಪೂಜಾರಿ, ಅಜಯ್ ಕುಮಾರ್ ಉಡುಪಿ ಮತ್ತಿತರರು ಉಪಸ್ಥಿತರಿದ್ದರು. ಶಶ್ಮಿತಾ ಅಜಯ್ ಸ್ವಾಗತಿಸಿದರು, ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಹಾಸ ಬಳಂಜ ನಿರೂಪಿಸಿದರು.

ಪರವೂರಿನಲ್ಲಿ ಕಷ್ಟಪಟ್ಟು ದುಡಿದು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ನೀಡುವ ಕಾರ್ಯ ಅಭಿನಂದನೀಯ. ಇದು ನಿರಂತರವಾಗಿ ನಡೆಯಲಿ, ವಿದ್ಯಾರ್ಥಿಗಳು ಸಾಧನೆ ಮಾಡಿ ತಾವೂ ವಿದ್ಯಾರ್ಥಿ ವೇತನ ವಿತರಿಸುವ ಕಾಲ ಕೂಡಿ ಬರಲಿ.

— ಕೋಟ ಶ್ರೀನಿವಾಸ ಪೂಜಾರಿ, ಸಂಸದ