ಯಕ್ಷಗಾನ ಕಲಾವಿದರಾದ ಶ್ರೀಕೃಷ್ಣ ರೈ ನಿರ್ಚಾಲು, ಅರುಣ್ ಕುಮಾರ್ ಜಾರ್ಕಳ ಮತ್ತು ಸನತ್ ಆಚಾರ್ಯ ಬೈಲೂರು ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಪ್ರಸನ್ನ ಸೂಡ ಕೆರೆಬೆಟ್ಟು, ಕಳ್ತೂರು ವಿಜಯ ಹೆಗ್ಡೆ, ಉದಯ ಶೆಟ್ಟಿ ಎಳಗೋಳಿ ಮತ್ತಿತರರಿದ್ದರು.
ವಿಜಯವಾಣಿ ಸುದ್ದಿಜಾಲ ಹೆಬ್ರಿ
ಯಕ್ಷಗಾನ ಕಲಾವಿದರಿಗೆ ನೀಡುವ ಗೌರವ ಅವರಿಗೆ ವಿಶೇಷ ಶಕ್ತಿ ತುಂಬಿದಂತೆ, ಅದು ಅತ್ಯುತ್ತಮ ಕಾರ್ಯ, ಅದರಿಂದಾಗಿ ಊರಿಗೂ ಹೆಸರು ಬರುತ್ತದೆ. ಯಕ್ಷಗಾನ ೇತ್ರವನ್ನು ಯಳಗೋಳಿ ರವೀಂದ್ರ ಪುರೋಹಿತ್ ನಿರಂತರವಾಗಿ ಪೋಷಿಸುತ್ತಿದ್ದಾರೆ ಎಂದು ಉದ್ಯಮಿ ಪ್ರಸನ್ನ ಸೂಡ ಕೆರೆಬೆಟ್ಟು ಹೇಳಿದರು.
ಶಿವಪುರ ಯಳಗೋಳಿ ದೈವಸ್ಥಾನದ ವಠಾರದಲ್ಲಿ ಹತ್ತು ಸಮಸ್ತರ ವತಿಯಿಂದ ಹೆಬ್ರಿ ಯಕ್ಷಚೇತನ ಕಲಾರಂಗದ ಯಳಗೋಳಿ ರವೀಂದ್ರ ಪುರೋಹಿತ್ ಹೆಬ್ರಿ ನೇತೃತ್ವದಲ್ಲಿ ಮಂಗಳವಾರ ಯಕ್ಷಗಾನ ಕಲಾವಿದರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಕ್ಷಗಾನ ಕಲಾ ಪೋಷಕ ಕಳ್ತೂರು ವಿಜಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾವಿದರಾದ ಶ್ರೀಕೃಷ್ಣ ರೈ ನಿರ್ಚಾಲು, ಅರುಣ್ ಕುಮಾರ್ ಜಾರ್ಕಳ ಮತ್ತು ಸನತ್ ಆಚಾರ್ಯ ಬೈಲೂರು ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿ ಉದಯ ಶೆಟ್ಟಿ ಎಳಗೋಳಿ, ಹಿಂದೂ ಮುಖಂಡ ಗಣೇಶ್ ಕುಮಾರ್ ಅರಸಮ್ಮಕಾನು, ಹೆಬ್ರಿ ಯಕ್ಷಚೇತನ ಕಲಾರಂಗದ ಯಳಗೋಳಿ ರವೀಂದ್ರ ಪುರೋಹಿತ್ ಹೆಬ್ರಿ, ಆಶಾ ರವೀಂದ್ರ ಪುರೋಹಿತ್, ವಿಶ್ವಕರ್ಮ ಸಮಾಜದ ಮುಖಂಡ ಹೆಬ್ರಿ ಟಿ.ಜಿ.ಆಚಾರ್ಯ, ನಿವೃತ್ತ ಸಬ್ ಇನ್ಸ್ಪೆಕ್ಟರ್ ಸಾಂತ್ಯಾರು ಸದಾಶಿವ ಆಚಾರ್ಯ ಬೈಲೂರು, ಶ್ರೀಧರ ಆಚಾರ್ಯ ಯಳಗೋಳಿ, ಚಂದ್ರಶೇಖರ ಆಚಾರ್ಯ ಯಳಗೋಳಿ, ನಿವೃತ್ತ ಮುಖ್ಯ ಶಿಕ್ಷಕಿ ಪ್ರೇಮ ಎಂ.ವರಂಗ, ಪ್ರವಿಣ್ ಸೂಡ ಕೆರೆಬೆಟ್ಟು, ಗ್ರಾಮ ಮೊಕ್ತೇಸರ ಪ್ರಕಾಶ ಆಚಾರ್ಯ ಯಳಗೋಳಿ ಮೊದಲಾದವರಿದ್ದರು.
ಕಾರ್ಯಕ್ರಮದ ಸಂಟಕ ರವೀಂದ್ರ ಪುರೋಹಿತ್ ಸ್ವಾಗತಿಸಿದರು. ಹರಿದಾಸ ಹೆಬ್ರಿ ಟಿ.ಜಿ.ಆಚಾರ್ಯ ನಿರೂಪಿಸಿದರು.
ಶ್ರೀೇತ್ರ ಕಳವಾರು ಬಾಳ ಶ್ರೀಬೆಂಕಿನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಅಮರಶಿಲ್ಪಿ ವೀರ ಶಂಭು ಕಲ್ಕುಡ ಕಥಾನಕ ಪ್ರದರ್ಶನಗೊಂಡಿತು.