ಕೆಳ ಕಬ್ಯಾಡಿ ಶ್ರೀ ಅಂಬಾಭವಾನಿ ದೇವಸ್ಥಾನದ ಸುತ್ತುಪೌಳಿಯ ನವೀಕರಣ ಹಾಗೂ ಜೀಣೋರ್ದ್ಧಾರದ ನಿಮಿತ್ತ ಸುದ್ದಿಗೋಷ್ಠಿ ನಡೆಯಿತು.  
ಉಡುಪಿ

ನ. 22ರಂದು ಅಂಬಾಭವಾನಿ ದೇವಸ್ಥಾನ ಜೀರ್ಣೋದ್ಧಾರ ಶಿಲಾನ್ಯಾಸ

ಉಡುಪಿ: ಕೆಳ ಕಬ್ಯಾಡಿ ಶ್ರೀ ಅಂಬಾಭವಾನಿ ದೇವಸ್ಥಾನದ ಸುತ್ತುಪೌಳಿಯ ನವೀಕರಣ ಹಾಗೂ ಜೀಣೋರ್ದ್ಧಾರದ ನಿಮಿತ್ತ ನ. 22ರಂದು ಶಿಲಾನ್ಯಾಸ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ಆಡಳಿತ ಮಂಡಳಿ ಹಾಗೂ ಜೀಣೋರ್ದ್ಧಾರ ಸಮಿತಿಯ ಅಧ್ಯಕ್ಷ ಕೆ. ಪ್ರಭಾಕರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬೆಳಿಗ್ಗೆ 9 ರಿಂದ ಆಹ್ವಾನಿತ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, 10 ರಿಂದ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ ಹಾಗೂ ಸ್ಥಳಶುದ್ಧಿ, 10:30ಕ್ಕೆ ವಿಧ್ಯುಕ್ತ ಶಿಲಾನ್ಯಾಸ ಕಾರ್ಯಕ್ರಮ, 11 ರಿಂದ ಧರ್ಮ ಸಭಾ ಕಾರ್ಯಕ್ರಮ ನಡೆಯಲಿದೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

ಆಡಳಿತ ಮಂಡಳಿ ಹಾಗೂ ಜೀಣೋರ್ದ್ಧಾರ ಸಮಿತಿಯ ಅಧ್ಯಕ್ಷ ಕೆ. ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಆರ್ಥಿಕ ಸಮಿತಿಯ ಅಧ್ಯಕ್ಷ ಬಿ. ಕರುಣಾಕರ ಶೆಟ್ಟಿ, ದೇವಸ್ಥಾನದ ಆಡಳಿತ ಮೊಕ್ತೇಸರ ಎಚ್​. ದೇವಿಪ್ರಸಾದ್​ ಹೆಗ್ಡೆ ಉಪಸ್ಥಿತರಿರುವರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಚಂಡೀಗಢ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಶ್​ ಪ್ರಸಾದ್​, ಶಾಸರಾದ ಗುರ್ಮೆ ಸುರೇಶ್​ ಶೆಟ್ಟಿ, ಯಶ್ಪಾಲ್​ ಎ ಸುವರ್ಣ, ಮಾಜಿ ಸಚಿವ ವಿನಯಕುಮಾರ್​ ಸೊರಕೆ, ಉದ್ಯಮಿ ಪ್ರಸಾದ್​ರಾಜ್​ ಕಾಂಚನ್​, ಆರ್ಬಿ ಶ್ರೀ ವೈಷ್ಣವಿ ದುರ್ಗಾ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಜಯರಾಜ್​ ಹೆಗ್ಡೆ, 80 ಬಡಗಬೆಟ್ಟು ಶ್ರೀ ಬ್ರಹ್ಮಬೈದರ್ಕಳ ಗರಳಿಯ ಆಡಳಿತ ಮೊಕ್ತೇಸರ ಬಿ. ಅರುಣಾಚಲ ಹೆಗ್ಡೆ ಹಾಗೂ ಕಬ್ಯಾಡಿ ಮಠದ ಕೆ. ಬಲರಾಮ ಆಚಾರ್ಯ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಜೀಣೋರ್ದ್ಧಾರ ಸಮಿತಿ ಪ್ರ.ಕಾ. ಅರುಣ್​ ಕುಮಾರ್​ ನಾಯಕ್​, ಕೋಶಾಧಿಕಾರಿ ಸುಕೇಶ್​ ನಾಯ್ಕ, ಪ್ರಚಾರ ಸಮಿತಿ ಅಧ್ಯಕ್ಷ ಡಾ. ಕೃಷ್ಣಾನಂದ ನಾಯಕ್​, ಹರಿಶ್ಚಂದ್ರ ಉಪಸ್ಥಿತರಿದ್ದರು.