ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು ಮಮತಾ ನವೀನ್ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಜಿ.ವಿ.ಕೃಷ್ಣ, ಕಿಶೋರ್ ಆಳ್ವ, ವಾರುತಿ, ಯಲ್ಲಮ್ಮ, ಶ್ರೀಧರ ಕೆ.ರಾವ್ ಮೊದಲಾದವರಿದ್ದರು. 
ಉಡುಪಿ

ವಿದ್ಯಾರ್ಜನೆ ಜತೆ ಬದುಕು ರೂಪಿಸುವ ಕೌಶಲ ಅಗತ್ಯ

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ
ವಿದ್ಯಾರ್ಜನೆ ಜತೆ ಬದುಕು ರೂಪಿಸುವ ಇತರ ಕೌಶಲ ಕಲಿಯುವುದು ಇಂದಿನ ಅಗತ್ಯ. ಮುಖ್ಯ ವೃತ್ತಿಯೊಂದಿಗೆ ಉಪವೃತ್ತಿಯ ಮಹತ್ವವನ್ನು ಮಕ್ಕಳು ತಿಳಿದುಕೊಳ್ಳುವುದು ಬದುಕಿನ ಯಶಸ್ಸಿಗೆ ಮೂಲ ಎಂದು ಜಯದೇವ ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ.ಪಿ.ಎಸ್.ಸೀತಾರಾಮ್ ಭಟ್ ಹೇಳಿದರು.
ಅದಮಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಪ್ರಾಕ್ತನ ಸಾಧಕರಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಉಡುಪಿ ಶ್ರೀ ಅದವಾರು ಮಠ ಶಿಕ್ಷಣ ಮಂಡಳಿ ಬೆಂಗಳೂರು ಗೌರವ ಕೋಶಾಧಿಕಾರಿ ಜಿ.ವಿ.ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಅದಾನಿ ಸಂಸ್ಥೆ ಅಧ್ಯಕ್ಷ ಕಿಶೋರ್ ಆಳ್ವ, ಶಾಲಾ ಶಿಕ್ಷಣ ಇಲಾಖೆ ಪದವಿಪೂರ್ವ ಉಪನಿರ್ದೇಶಕ ವಾರುತಿ, ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ, ಅದವಾರು ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆ ಗೌರವ ಕಾರ್ಯದರ್ಶಿ ಶ್ರೀಧರ ಕೆ.ರಾವ್, ಗೌರವ ಕೋಶಾಧಿಕಾರಿ ಸಿ.ಎ.ಗಣೇಶ್ ಹೆಬ್ಬಾರ್, ಆಂಗ್ಲ ವಾಧ್ಯಮ ಪ್ರೌಢಶಾಲೆ ಮುಖ್ಯಶಿಕ್ಷಕಿ ಕಾಂತಿ ಭಟ್ ಉಪಸ್ಥಿತರಿದ್ದರು.
ಸಂಜೀವ ನಾಯಕ್ ಸ್ವಾಗತಿಸಿದರು. ರಾಧಾಕೃಷ್ಣ ಕಿಣಿ, ತೇಜಸ್ ಬಳ್ಳಾಲ್, ದೇವಿಪ್ರಸಾದ್, ಆದಿತ್ಯ ಬಳ್ಳಾಲ್, ಯಶೋಧಾ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕಿ ದೀಪಿಕಾ ಶೆಟ್ಟಿ ನಿರೂಪಿಸಿದರು. ಆರ್.ಶ್ರೀಕಾಂತ್ ರಾವ್ ವಂದಿಸಿದರು.

ಸಾಧಕರಿಗೆ ಸನ್ಮಾನ

ಪ್ರಾಕ್ತನ ಸಾಧಕರಾದ ಬೆಂಗಳೂರು ಆಕಾಶವಾಣಿಯ ನಿವೃತ್ತ ಸಹಾಯಕ ನಿರ್ದೇಶಕಿ ಕನ್ಸೆಪ್ಟಾ ರ್ನಾಂಡಿಸ್, ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಗೋವಿಂದ ರಾಜ್, ಯಕ್ಷಗಾನ ಭಾಗವತ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರ ಪರವಾಗಿ ತಾರಾನಾಥ್, ಬೆಂಗಳೂರು ಮಣಿಪಾಲ ಸಮೂಹ ಆಸ್ಪತ್ರೆ ಹಿರಿಯ ನಿರ್ದೇಶಕಿ ಡಾ.ವಸುದಾ ಶೆಟ್ಟಿ, ಜಾನಪದ ವಿದ್ವಾಂಸ ಕೆ.ಎಲ್.ಕುಂಡಂತಾಯ, ಪಡುಬಿದ್ರಿ ಅಂಚನ್ ಆಯುರ್ವೇದ ಇಂಡಸ್ಟ್ರೀಸ್‌ನ ಡಾ.ಎನ್.ಟಿ.ಅಂಚನ್, ಅಂತಾರಾಷ್ಟ್ರೀಯ ಕ್ರೀಡಾಪಟು ಮಮತಾ ನವೀನ್, ನಿವೃತ್ತ ಪ್ರಾಂಶುಪಾಲ ಸುದರ್ಶನ್ ವೈ.ಎಸ್, ನಿವೃತ್ತ ಸೇನಾಧಿಕಾರಿ ಸುಬೇಧಾರ್ ಅನಂತರಾಮ ರಾವ್ ಅವರನ್ನು ಸನ್ಮಾನಿಸಲಾಯಿತು.