ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಸಭೆಯನ್ನು ರವಿರಾಜ ಉದ್ಘಾಟಿಸಿದರು. ರವೀಶ ತಂತ್ರಿ ಕುಂಟಾರು, ಸಂಜೀವ ಶೆಟ್ಟಿ ಮೊಟ್ಟೆಕುಂಜೆ ಮೊದಲಾದವರಿದ್ದರು.  
ಉಡುಪಿ

ಸಂಘಟಿತರಾಗಿ ತೊಡಗಿಸಿಕೊಂಡಾಗ ಎಲ್ಲ ಕಾರ್ಯ ಯಶಸ್ವಿ

ಬದಿಯಡ್ಕ: ಸಂಘಟಿತರಾಗಿ ತೊಡಗಿಸಿಕೊಂಡಾಗ ಎಲ್ಲ ಕಾರ್ಯಗಳು ಯಶಸ್ವಿಯಾಗುತ್ತವೆ. ಕಲಿಯುಗದಲ್ಲಿ ಭಜನೆಯೇ ತಪಸ್ಸು. ಮನುಷ್ಯ ಜೀವನದಲ್ಲಿ ಸರಿಯಾದ ರೀತಿಯಲ್ಲಿ ನಡೆದುಕೊಂಡು ಹೋಗುವುದಕ್ಕೆ ಸೂಕ್ತ ಮಾರ್ಗ ಭಾಗವತದಲ್ಲಿದೆ ಎಂದು ರವೀಶ ತಂತ್ರಿ ಕುಂಟಾರು ಹೇಳಿದರು.
ಭಾನುವಾರ ಕುರುಮುಜ್ಜಿಕಟ್ಟೆ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಏಪ್ರಿಲ್ 10ರಿಂದ 16ರ ತನಕ ನಡೆಯುವ ಶ್ರೀ ಮದ್ಭಾಗವತ ಸಪ್ತಾಹದ ಸಮಿತಿ ರಚನಾ ಸಭೆಯಲ್ಲಿ ಮಾತನಾಡಿದರು.
ಮಂದಿರದ ಅರ್ಚಕ, ಅಧ್ಯಾಪಕ ರವಿರಾಜ ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಮಂದಿರದ ಸೇವಾ ಸಮಿತಿ ಅಧ್ಯಕ್ಷ ಕೆ.ವಿ.ರಮೇಶ್ ಶರ್ಮ ಅಧ್ಯಕ್ಷತೆ ವಹಿಸಿದ್ದರು.
ಧಾರ್ಮಿಕ ಮುಂದಾಳು, ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಸಂಜೀವ ಶೆಟ್ಟಿ ಮೊಟ್ಟೆಕುಂಜೆ, ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ, ಶಿಕ್ಷಕ ಹರಿನಾರಾಯಣ ಶಿರಂತಡ್ಕ, ಕುಂಬ್ಡಾಜೆ ಗ್ರಾಪಂ ಉಪಾಧ್ಯಕ್ಷ ರವೀಂದ್ರ ರೈ ಗೋಸಾಡ, ರಾಮಚಂದ್ರ ಮಾರ್ಪನಡ್ಕ, ಕೃಷ್ಣಮೂರ್ತಿ ಎಡಪ್ಪಾಡಿ, ಅಚ್ಚುತ ಮಾಸ್ತರ್ ಅಗಲ್ಪಾಡಿ, ರವೀಂದ್ರನಾಥ್ ಭಂಡಾರಿ ನಾರಂಪಾಡಿ, ವಾಣಿ ಪ್ರಸಾದ ಅಮ್ಮಣ್ಣಾಯ, ಗುರುಸ್ವಾಮಿ ನಾರಾಯಣ ಮುಖಾರಿ ಮುಂತಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ವಲಯದ ಗಣ್ಯರು ಉಪಸ್ಥಿತರಿದ್ದರು. ವಿವಿಧ ಉಪಸಮಿತಿಗಳನ್ನು ರಚಿಸಲಾಯಿತು.
ಬಾಲಕೃಷ್ಣ ಕುರುಮುಜ್ಜಿ ಪ್ರಾರ್ಥಿಸಿದರು. ಶ್ರೀ ಧರ್ಮಶಾಸ್ತ ಭಜನಾ ಮಂದಿರ ಅಧ್ಯಕ್ಷ ರಾಧಾಕೃಷ್ಣ ನಾಯರ್ ಸ್ವಾಗತಿಸಿದರು. ಮಹಾಲಿಂಗ ಮಾಸ್ತರ್ ವಂದಿಸಿದರು. ನಾರಾಯಣ ಕೆ.ಎಂ. ನಿರೂಪಿಸಿದರು.