ಕಾಸರಗೋಡು: ಮಂಜೇಶ್ವರ ಠಾಣೆ ಪೊಲೀಸರು ವಾಹನ ತಪಾಸಣೆ ನಡೆಸುವಾಗ ಸ್ಕೂಟರ್‌ನಲ್ಲಿ ಪತ್ತೆಯಾದ 180 ಎಂಎಲ್‌ನ 34 ಟೆಟ್ರಾ ಪ್ಯಾಕೆಟ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಸ್ಕೂಟರ್ ಬಿಟ್ಟು ಪರಾರಿಯಾದ ಸವಾರನಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಮಂಜೇಶ್ವರ ಠಾಣೆಯ ಎಸ್‌ಐ ಶರತ್.ಕೆ.ಪಿ. ನೇತೃತ್ವದ ಪೊಲೀಸರ ತಂಡ ಬಂಗ್ರಮಂಜೇಶ್ವರ ಸೇತುವೆ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಹೊಸಂಗಡಿ ಕಡೆಯಿಂದ ಬರುತ್ತಿದ್ದ ಸ್ಕೂಟರ್‌ಗೆ ಸೂಚನೆ ನೀಡುತ್ತಿದ್ದಂತೆ, ಸವಾರ ರಸ್ತೆ ಬದಿ ಸ್ಕೂಟರ್ ನಿಲ್ಲಿಸಿ ಪರಾರಿಯಾಗಿದ್ದಾನೆ.