ಮಂಗಳೂರು ವಿವಿ ಅಂತರ್​ ಕಾಲೇಜ್​ ಕುಸ್ತಿ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಉಡುಪಿ ಅಜ್ಜರಕಾಡು ಕಾಲೇಜ್​ನ ಅದಿತಿ ಶೆಟ್ಟಿ, ದಿಶಾ ಡಿ. ಸಾಲ್ಯಾನ್​, ಮಾನೀಕ್ಷಾ ಪ್ರಶಸ್ತಿ ಸ್ವೀಕರಿಸಿದರು. ಡಾ. ಯತೀಶ್​ ಕುಮಾರ್​, ಚಂದ್ರಿಕಾ ಕಾಂಬ್ಳೆ ಇತರರು ಇದ್ದರು. 
ಉಡುಪಿ

ಮಹಿಳಾ ಕುಸ್ತಿಯಲ್ಲಿ ಅಜ್ಜರಕಾಡು ಕಾಲೇಜ್​ಗೆ ಮೂರು ಪದಕ

* ಡಾ. ಜಿ.ಶಂಕರ್​ ಕಾಲೇಜ್​ ವಿದ್ಯಾರ್ಥಿನಿಯರ ಸಾಧನೆ

ಉಡುಪಿ: ಅಜ್ಜರಕಾಡಿನ ಡಾ. ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್​ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿಯರು ಮಂಗಳೂರು ವಿಶ್ವವಿದ್ಯಾನಿಲಯದ ಅಂತರ್​ ಕಾಲೇಜ್​ ಕುಸ್ತಿ ಸ್ಪರ್ಧೆಯಲ್ಲಿ ಮೂರು ವೈಯಕ್ತಿಕ ಪದಕ ಗೆದ್ದು, ಸಮಗ್ರ ಚಾಂಪಿಯನ್​ಶಿಪ್​ನಲ್ಲಿ ಪ್ರಥಮ ರನ್ನರ್​ಅಪ್​ ಸ್ಥಾನ ಗಳಿಸಿದ್ದಾರೆ.

65 ಕೆಜಿ ವಿಭಾಗದಲ್ಲಿ ಅದಿತಿ ಶೆಟ್ಟಿ ಪ್ರಥಮ ಸ್ಥಾನ, 68 ಕೆಜಿ ವಿಭಾಗದಲ್ಲಿ ದಿಶಾ ಡಿ. ಸಾಲ್ಯಾನ್​ ದ್ವಿತೀಯ, 59 ಕೆಜಿ ವಿಭಾಗದಲ್ಲಿ ಮಾನೀಕ್ಷಾ ತೃತೀಯ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ.

ಅಂತರ್​ ಕಾಲೇಜ್​ ಕುಸ್ತಿ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ಅಜ್ಜರಕಾಡಿನ ಡಾ. ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್ ವಿದ್ಯಾರ್ಥಿನಿಯರು.

ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸೆ.23, 24ರಂದು ಸುರತ್ಕಲ್​ನ ಗೋವಿಂದ ದಾಸ ಕಾಲೇಜ್​ನಲ್ಲಿ ಸ್ಪರ್ಧೆ ನಡೆದಿತ್ತು.

ಸಾಧಕ ವಿದ್ಯಾರ್ಥಿನಿಯರಿಗೆ ಅಜ್ಜರಕಾಡು ಕಾಲೇಜ್​ನ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಯತೀಶ್​ ಕುಮಾರ್​ ಹಾಗೂ ಕ್ರೀಡಾ ಇಂಟರ್ನ್​ ಚಂದ್ರಿಕಾ ಕಾಂಬ್ಳೆ ತರಬೇತಿ ನೀಡಿದ್ದರು ಎಂದು ಕಾಲೇಜ್​ನ ಪ್ರಾಂಶುಪಾಲೆ ಪ್ರೊ. ನಿಕೇತನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.