ಉಡುಪಿಯ ಪರ್ಕಳದಲ್ಲಿ ಆಯೋಜಿಸಿದ್ದ 'ಐಸಿರಿದ ಐಸಿರೊ' ಕಾರ್ಯಕ್ರಮದಲ್ಲಿ ಸಾಧಕ ಕೃಷಿಕರಾದ ಸಾತ್ವಿಕ್ ಕುಮಾರ್ ಮತ್ತು ಬದ್ರಿನಾರಾಯಣ ನಾಯ್ಕ್ ಅವರಿಗೆ 'ಕಲ್ಪವೃಕ್ಷ ಪ್ರಶಸ್ತಿ' ಪ್ರದಾನ ಮಾಡಲಾಯಿತು. ಹೇಮಂತ್ ಯು. ಕಾಂತ್, ಕೃಷ್ಣಪ್ಪ, ಗುರುಪ್ರಸಾದ್ ಕಾಮತ್, ಸಂದೀಪ್ ಕುಮಾರ್, ಲಕ್ಷ್ಮೀ ನಾಯ್ಕ್, ಸುಕೇಶ್ ಕುಂದರ್ ಇತರರಿದ್ದರು.
* ರೊ. ಹೇಮಂತ್ ಯು. ಕಾಂತ್ ಅಭಿಪ್ರಾಯ
* ಪರ್ಕಳದಲ್ಲಿ ಕೃಷಿ ಸಾಧಕರಿಗೆ ಪ್ರಶಸ್ತಿ ಪ್ರದಾನ
ಉಡುಪಿ: ಕೃಷಿಯೇ ನಮ್ಮ ದೇಶದ ಶಕ್ತಿ. ಕಾರಣಾಂತರದಿಂದ ಇಂದಿನ ಯುವಸಮುದಾಯ ಕೃಷಿಯಿಂದ ವಿಮುಖರಾಗಿ ಉದ್ಯೋಗಕ್ಕಾಗಿ ಪಟ್ಟಣ, ನಗರ, ವಿದೇಶದತ್ತ ಮುಖ ಮಾಡಿದ್ದಾರೆ. ಮುಂದೊಂದು ದಿನ ಜನಜೀವನಕ್ಕೆ ಕೃಷಿ ಕಾರ್ಯವೇ ಆಸರೆಯಾಗಲಿದೆ ಎಂದು ರೋಟರಿ ಜಿಲ್ಲೆ 3182 ವಲಯ 4ರ ಸಹಾಯಕ ಗವರ್ನರ್ ರೊ. ಮೇಜರ್ ಡೋನರ್ ಹೇಮಂತ್ ಯು. ಕಾಂತ್ ಅಭಿಪ್ರಾಯಪಟ್ಟರು.
ಪರ್ಕಳದ ಕಬ್ಯಾಡಿ ಪ್ರಭಾವನದಲ್ಲಿ ರೋಟರಿ ಐಸಿರಿ ಪರ್ಕಳ ಮತ್ತು ಸಮುದಾಯ ದಳ ಐಸಿರಿ ಪರ್ಕಳದ ವತಿಯಿಂದ ಆಯೋಜಿಸಿದ್ದ 'ಐಸಿರಿದ ಐಸಿರೊ 2026-27' ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾತ್ವಿಕ್ ಕುಮಾರ್ ಮತ್ತು ಬದ್ರಿನಾರಾಯಣ ನಾಯ್ಕ್ ಅವರಿಗೆ 'ಕಲ್ಪವೃಕ್ಷ ಪ್ರಶಸ್ತಿ' ಹಾಗೂ ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ ಶಾಂತಾ ನಾಯ್ಕ್ ಮತ್ತು ಸೀತಾರಾಮ ಶೆಟ್ಟಿ ಅವರಿಗೆ 'ಕಾಮಧೇನು ಪ್ರಶಸ್ತಿ' ನೀಡಿ ಗೌರವಿಸಲಾಯಿತು.
ರೊ. ಕೃಷ್ಣಪ್ಪ, ರೊ. ಗುರುಪ್ರಸಾದ್ ಕಾಮತ್ ಮಾತನಾಡಿದರು. ರೊ. ಸಂದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಆರ್ಸಿಸಿ ಅನಸೂಯಾ ಪ್ರಾರ್ಥಿಸಿದರು. ಸಮುದಾಯ ದಳ ಐಸಿರಿಯ ಅಧ್ಯೆ ಆರ್ಸಿಸಿ ಲಕ್ಷ್ಮೀ ನಾಯ್ಕ್ ಸ್ವಾಗತಿಸಿದರು. ರೊ. ಸುಕೇಶ್ ಕುಂದರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರೊ. ರಾಜೇಶ್ ಡಿ. ಶೆಣೈ ಪರಿಚಯಿಸಿದರು. ಸಮುದಾಯ ದಳ ಐಸಿರಿ ಕಾರ್ಯದರ್ಶಿ ಆರ್ಸಿಸಿ ಶಾರದಾ ಎಸ್. ವಂದಿಸಿದರು. ರೊ. ಮಂಜುನಾಥ್ ಉಪಾಧ್ಯ ಮತ್ತು ಆರ್ಸಿಸಿ ಶೋಭಾ ಅವರು ಕೊರಳ ಲಾಂಛನದ ಕಾರ್ಯ ನಿರ್ವಹಿಸಿದರು. ಆರ್ಸಿಸಿ ಶಾಲಿನಿ ಸಾಮಂತ್ ಕಾರ್ಯಕ್ರಮ ನಿರೂಪಿಸಿದರು.