ಬಂಟಕಲ್ಲು ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಮಲ್ಲಿಗೆ ಗಿಡಗಳ ಆರೋಗ್ಯ ಮೇಲ್ವಿಚಾರಣೆ ಮಾಡುವ ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿರುವುದು.
ಶಿರ್ವ: ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಕಾವ್ಯಾ, ಪ್ರಜ್ಞಾ, ಶ್ರೀಪ್ರಿಯಾ ಹಾಗೂ ಶ್ರೇಯಾ ಶೆಟ್ಟಿ ಅವರು ವಿಭಾಗ ಮುಖ್ಯಸ್ಥ ಡಾ.ರಾಜೇಶ್ ನಾಯಕ್ ವಾರ್ಗದರ್ಶನದಲ್ಲಿ ಮಲ್ಲಿಗೆ ಗಿಡಗಳ ಆರೋಗ್ಯ ಮೇಲ್ವಿಚಾರಣೆ ವಾಡುವ ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದಾರೆ.
ಮಲ್ಲಿಗೆ ಗಿಡದ ಪೋಷಕಾಂಶಗಳನ್ನು ವಿಶ್ಲೇಷಿಸಿ ಹಾಗೂ ಎಲೆಗಳ ಚಿತ್ರ ಸಂಸ್ಕರಣಾ ತಂತ್ರಜ್ಞಾನ ಸಂಯೋಜಿಸಿ, ಸಸ್ಯ ರೋಗಗಳು ಮತ್ತು ಪೋಷಕಾಂಶಗಳ ಕೊರತೆಯನ್ನು ಆರಂಭಿಕ ಹಂತದಲ್ಲಿ ಗುರುತಿಸುವ ಸಾಮರ್ಥ್ಯ ಹೊಂದಿದೆ. ಕೃತಕ ಬುದ್ಧಿಮತ್ತೆ, ಯಂತ್ರ ಅಧ್ಯಯನ ಮತ್ತು ವಿವರಣಾತ್ಮಕ ತಂತ್ರಜ್ಞಾನ ಬಳಸುವ ಈ ವ್ಯವಸ್ಥೆ ರೈತರಿಗೆ ಸಮಯೋಚಿತ ವಾಹಿತಿ ಒದಗಿಸಿ, ಬೆಳೆ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಸಹಕಾರಿಯಾಗುತ್ತದೆ. ಇದರಿಂದ ಮಲ್ಲಿಗೆ ಹೂವಿನ ಉತ್ಪಾದನೆ ಹೆಚ್ಚುವುದರ ಜತೆಗೆ ಸುಸ್ಥಿರ ಕೃಷಿ ಪದ್ಧತಿಗಳಿಗೂ ಉತ್ತೇಜನ ದೊರೆಯಲಿದೆ.