ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಸ್ಕೂಲ್ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಗುರ್ಮೆ ಸುರೇಶ್ ಶೆಟ್ಟಿ, ನವನೀತ ಅರಸ್ ಎ., ರೇವತಿ ಮೊದಲಾದವರಿದ್ದರು.
ಹೆಬ್ರಿ: ಶಿಷ್ಯರು ತನಗಿಂತ ಎತ್ತರಕ್ಕೆ ಏರಿದರೆ ಗುರುವು, ಮಕ್ಕಳು ಸಾಧನೆ ಮೆರೆದರೆ ಮಾತಾಪಿತರು ಅತೀವ ಸಂತಸಪಡುತ್ತಾರೆ. ಇಂಜಿನಿಯರಿಂಗ್ ಕ್ಷೇತ್ರದ ಬಗ್ಗೆ ಅತಿಯಾದ ವ್ಯಾಮೋಹ ಬೇಡ. ಕೇವಲ ಇಂಜಿನಿಯರಿಂಗ್ ಮಾತ್ರವಲ್ಲದೆ ಬಿಎಸ್ಸಿ ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಶಾಸದಂತಹ ಕ್ಷೇತ್ರಗಳಲ್ಲಿ ಉತ್ತಮ ಉದ್ಯೋಗಾವಕಾಶಗಳಿವೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ತಿಳಿಸಿದರು.
ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಸನ್ಮಾನ, ಬೀಳ್ಕೊಡುಗೆ, ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ಸಂವನ್ನು ಉದ್ಘಾಟಿಸಿ ವಾತನಾಡಿದರು.
ನಿವೃತ್ತಿ ಹೊಂದಿದ ರಸಾಯನ ಶಾಸ ಉಪನ್ಯಾಸಕ ನವನೀತ ಅರಸ್ ಎ., ಶಿಕ್ಷಕಿ ರೇವತಿ ಅವರನ್ನು ಸನ್ಮಾನಿಸಲಾಯಿತು. ವರ್ಗಾವಣೆಗೊಂಡ ಎಸ್.ಡಿ.ಎ. ನಿಶ್ಚಲ್ ಕ್ಲಿಂಟನ್ ಸಾಲಿನ್ಸ್ ಅವರನ್ನು ಬೀಳ್ಕೊಡಲಾಯಿತು.
ಮಣಿಪಾಲದ ಆಡಳಿತ ಅಧಿಕಾರಿ ಡಾ.ಕೆ.ಶ್ರೀಧರ್ ರಂಗನಾಥ ಪೈ, ಎಸ್‌ಡಿಎಂಸಿ ಉಪಾಧ್ಯಕ್ಷ ಬಿ.ಎಲ್.ವಿಶ್ವಾಸ್, ಪ್ರಮುಖರಾದ ಶ್ರೀನಿವಾಸ ರಾವ್, ಮುರಳೀಧರ ಹಾಲಂಬಿ, ಪ್ರಕಾಶ್ ಪ್ರಭು ಉಪಸ್ಥಿತರಿದ್ದರು. ಪ್ರಾಂಶುಪಾಲ ಮಂಜುನಾಥ್ ಭಟ್ ಸ್ವಾಗತಿಸಿದರು. ರಮೇಶ್ ನಾಯ್ಕ ವಂದಿಸಿದರು.