ಕೈಗೆಟಕುವಂತಿರುವ ವಿದ್ಯುತ್ ತಂತಿಗಳು.
ಉಪ್ಪಳ: ಮಂಗಲ್ಪಾಡಿ ಪಂಚಾಯಿತಿಯ ಶಿರಿಯ ವಾನಂದೆ ತೋಟ, ಬಯಲು ಪ್ರದೇಶದಲ್ಲಿ ಕೈಗೆಟುವ ರೀತಿಯಲ್ಲಿರುವ ಹಳೇಕಾಲದ ವಿದ್ಯುತ್ ತಂತಿಗಳು ಹಾದುಹೋಗಿದ್ದು ಆತಂಕವನ್ನುಂಟು ವಾಡುತ್ತಿದೆ. ಶಿರಿಯ ಟ್ರಾನ್ಸ್‌ಫಾರ್ಮರ್‌ನಿಂದ ಹಾದುಹೋಗಿರುವ ವಿದ್ಯುತ್ ತಂತಿಗಳು ತೀರಾ ಕೆಳಭಾಗದಲ್ಲಿದ್ದು ಯಾವುದೇ ಕ್ಷಣದಲ್ಲಾದರೂ ತುಂಡಾಗಿ ಬೀಳುವ ಆತಂಕ ಕಾಡುತ್ತಿದೆ.
ಈ ತಂತಿಗಳನ್ನು ಬದಲಾಯಿಸುವಂತೆ ಸ್ಥಳೀಯ ಕೃಷಿಕರು ಹಲವು ಬಾರಿ ತಿಳಿಸಿದರೂ ವಿದ್ಯುತ್ ಇಲಾಖೆ ಅಧಿಕಾರಿಗಳು ಯಾವುದೇ ಕ್ರಮಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. ಮಳೆ- ಗಾಳಿಗೆ ಯಾವುದೇ ಕ್ಷಣದಲ್ಲಿ ತುಂಡಾಗಿ ಬೀಳುವ ಸಾಧ್ಯತೆ ಇದೆ. ದುರಂತ ಸಂಭವಿಸುವ ಮೊದಲೇ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು ಎಂದು ಕೃಷಿಕರು ಒತ್ತಾಯಿಸಿದ್ದಾರೆ.