ಅಡ್ವೆಯಲ್ಲಿ ನಡೆದ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಪಡುಬಿದ್ರಿ ವಲಯದ ಪ್ರಥಮ ಸಮ್ಮೇಳನದಲ್ಲಿ ಕೆ. ರಾಜೇಂದ್ರ ಉಡುಪ ಮಾತನಾಡಿದರು.  
ಉಡುಪಿ

ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಪಡುಬಿದ್ರಿ ವಲಯ ಪ್ರಥಮ ಸಮ್ಮೇಳನ

ವಿಜಯವಾಣಿಸುದ್ದಿಜಾಲ ಪಡುಬಿದ್ರಿ

ಕರಾವಳಿಕರ್ನಾಟಕದ ಮೂಲ ನಿವಾಸಿಗಳಾಗಿರುವಕೊರಗ ಸಮುದಾಯದ ವಂಶವಾಹಿ ಕೊರಗರಲ್ಲಿಮಾತ್ರವಲ್ಲದೆ ಎಲ್ಲರಲ್ಲಿಯೂಇದೆ ಎಂದು ನಿವೃತ್ತ ಪ್ರಾಧ್ಯಾಪಕಕೆ.ರಾಜೇಂದ್ರಉಡುಪ ಹೇಳಿದರು.

ಅಡ್ವೆಆನಂದಿ ಸಭಾಭವನದಲ್ಲಿ ಭಾನುವಾರನಡೆದ ಕರ್ನಾಟಕ ಆದಿವಾಸಿ ಹಕ್ಕುಗಳಸಮನ್ವಯ ಸಮಿತಿ ಪಡುಬಿದ್ರಿ ವಲಯಪ್ರಥಮ ಸಮ್ಮೇಳನ ಉದ್ಘಾಟಿಸಿಮಾತನಾಡಿದರು.

ಸಾಮಾಜಿಕಹೋರಾಟಗಾರ ಮುನೀರ್ ಕಾಟಿಪಳ್ಳಮಾತನಾಡಿ,ಮಹಮ್ಮದ್ಪೀರ್ ವರದಿಯ ಸಮಗ್ರ ಅನುಷ್ಠಾನಮತ್ತು ಒಳಮೀಸಲಾತಿ ಕೊರಗ ಸಮುದಾಯಮಾತ್ರವಲ್ಲದೆ ನಾಗರಿಕ ಸಮುದಾಯಹೋರಾಟಕ್ಕೆ ಇಳಿಯುವ ಅವಶ್ಯಕತೆಇದೆ ಎಂದು ಹೇಳಿದರು.

ಕರಿಯಕೆ.,ಮಹಿಳಾಪರ ಹೋರಾಟಗಾರ್ತಿ ಕೀರ್ತಿ ಸಾಲ್ಯಾನ್,ದೀಪಕ್ಕಾಮತ್ ಮಾತನಾಡಿದರು.ಸಂಘಟನೆನಾಯಕ ಶಶಿಧರ ಕೆರೆಕಾಡು ಅಧ್ಯಕ್ಷತೆವಹಿಸಿದ್ದರು.ಸ್ವಾಗತಸಮಿತಿ ಪದಾಧಿಕಾರಿಗಳಾದ ಟಿ.ಪ್ರಾನ್ಸಿಸ್ಸಲ್ದಾನ,ಟಿ.ಉಮರಬ್ಬ,ಉಮ್ಮರ್ಕಾಸಿಂ ಉಪಸ್ಥಿತರಿದ್ದರು.ಸ್ವಾಗತಸಮಿತಿ ಅಧ್ಯಕ್ಷ ಐ.ಲಕ್ಷ್ಮೀಕಾಂತರಾವ್ ಇನ್ನಾ ಸ್ವಾಗತಿಸಿದರು.ಸ್ವಾಗತಸಮಿತಿ ಪ್ರಧಾನ ಕಾರ್ಯದರ್ಶಿಕೃಷ್ಣ ಇನ್ನಾ ಹಾಗೂ ಪ್ರಮೀಳ ಕೆ.ಕಾರ್ಯಕ್ರಮನಿರೂಪಿಸಿದರು.

ಸರ್ಕಾರಕ್ಕೆನಿರ್ಣಯ ಸಲ್ಲಿಕೆಗೆ ತೀರ್ಮಾನ

ಕೊರಗಸಮುದಾಯದ ಭೂಮಿಯ ಪ್ರಶ್ನೆ,ವಸತಿ,ಶಿಕ್ಷಣ,ನಿರುದ್ಯೋಗದಪರಿಸ್ಥಿತಿ ಮತ್ತು ಒಳಮೀಸಲಾತಿಬಗ್ಗೆ ಹಕ್ಕೊತ್ತಾಯ ಮಂಡಿಸಲಾಯಿತು.ಈನಿರ್ಣಯಗಳನ್ನು ಜಿಲ್ಲಾಡಳಿತಹಾಗೂ ಸರ್ಕಾರಕ್ಕೆ ಕಳುಹಿಸಿಕೊಡುವಬಗ್ಗೆ ಕೊರಗ ಸಮ್ಮೇಳನದಲ್ಲಿತೀರ್ಮಾನಿಸಲಾಯಿತು.

ನಮ್ಮೆಲ್ಲರ ನಾಗರಿಕ ಬದುಕಿನ ಕಾರಣಕರ್ತರಾಗಿರುವ ಕೊರಗ ಸಮುದಾಯಕ್ಕೆ ಚಾರಿತ್ರಿಕ ಅನ್ಯಾಯವೆಸಗಲಾಗಿದೆ. ಆ ಅಪರಾಧಿ ಭಾವನೆಗೆ ನಾವು ಬೆಲೆತೆರಬೇಕಾದ ಕಾಲ ಬಂದಿದೆ. ಪೆರಿಯಾರ್ ಅವರ ಸೆಲ್ಫ್ ರೆಸ್ಪೆಕ್ಟ್ ಚಳವಳಿಯಿಂದ ಸ್ಫೂರ್ತಿ ಪಡೆಯಬೇಕಾಗಿದೆ.