ಆದರ್ಶ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಉಡುಪಿ: ಆದರ್ಶ ಚಾರಿಟೇಬಲ್ ಟ್ರಸ್ಟ್, ಜಿಲ್ಲಾಸ್ಪತ್ರೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೆಕ್ಷಣಾ ಟಕ, ರೆಡ್ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ನ.16ರಂದು ಬೆಳಗ್ಗೆ 9 ರಿಂದ 4ರವರೆಗೆ ಬೋರ್ಟ್ ಹೈಸ್ಕೂಲ್ ಮೈದಾನದಲ್ಲಿ ಡಯಾಬಿಟೀಸ್ ಮೇಳ ಆಯೋಜಿಸಲಾಗಿದೆ ಎಂದು ಆದರ್ಶ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಶಾಸಕ ಯಶ್ಪಾಲ್ ಸುವರ್ಣ ಉದ್ಘಾಟಿಸಲಿದ್ದಾರೆ. ಡಿಎಚ್ಒ ಡಾ. ಬಸವರಾಜ ಹುಬ್ಬಳ್ಳಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಅಶೋಕ್, ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ , ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ್, ಎಪಿಐ ಅಧ್ಯಕ್ಷ ಡಾ. ಸುರೇಶ್ ಹೆಗ್ಡೆ, ಐಎಂಎ ಅಧ್ಯಕ್ಷ ಡಾ. ಅಶೋಕ್ ಕುಮಾರ್ ಉಪಸ್ಥಿತರಿರುವರು ಎಂದರು.
ಮೇಳದಲ್ಲಿ ಮಾದರಿ ಡಯಾಬಿಟೀಸ್ ಪಥ್ಯಾಹಾರ ಪ್ರದರ್ಶನ, ವ್ಯಾಯಾಮ ಮತ್ತು ಯೋಗ ಪ್ರಾತ್ಯಕೆ, ಆದರ್ಶ ದೇಹತೂಕ ಪ್ರಾತ್ಯಕೆ, ಇನ್ಸುಲಿನ್ ಉಪಯೋಗಿಸುವ ಮಾಹಿತಿ, ಡಯಾಬಿಟೀಸ್ ಮತ್ತು ಹೈದ್ರೋಗ ಖಾಯಿಲೆಗಳು, ಡಯಾಬಿಟೀಸ್ ಮತ್ತು ಕಿಡ್ನಿ ತೊಂದರೆಗಳು, ಗ್ಲುಕೋಮೀಟರ್ ಉಪಯೋಗಿಸುವ ವಿಧಾನ ಬಗ್ಗೆ ಮಾಹಿತಿ ನೀಡಲಾಗುವುದು. ಉಚಿತವಾಗಿ ರಕ್ತ ಪರೀೆ, ಕಿಡ್ನಿ ಪರಿೆ, ಇಸಿಜಿ, ಕಣ್ಣಿನ ಪರೀೆ ನಡೆಸಲಾಗುವುದು ಎಂದು ಹೇಳಿದರು.
ಆಸ್ಪತ್ರೆ ನಿರ್ದೇಶಕ ಡಾ. ಸುಹಾಸ್ ಜಿ.ಸಿ., ಮ್ಯಾನೇಜರ್ ಡಿಯಾಗೋ ಕ್ವಾಡ್ರಸ್, ಮಾರುಕಟ್ಟೆ ವಿಭಾಗದ ರೋವಿನ್ ಡಿಸೋಜಾ ಉಪಸ್ಥಿತರಿದ್ದರು.