ಅದಾನಿ ಗ್ರೂಪ್​ನ ಕಾರ್ಯನಿರ್ವಾಹಕ ನಿರ್ದೇಶಕ, ಅಧ್ಯಕ್ಷ ಕಿಶೋರ್​ ಆಳ್ವ. 
ಉಡುಪಿ

ಅಸ್ಸೋಚಾಮ್​ ರಾಜ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಕಿಶೋರ್​ ಆಳ್ವ ನೇಮಕ

* ಅದಾನಿ ಗ್ರೂಪ್​ನ ಕರ್ನಾಟಕದ ಕಾರ್ಯನಿರ್ವಾಹಕ ನಿರ್ದೇಶಕ

ಉಡುಪಿ: ದಿ ಅಸೋಸಿಯೇಟೆಡ್​ ಚೇಂರ್ಬಸ್​ ಆಫ್​ ಕಾಮರ್ಸ್​ ಆ್ಯಂಡ್​ ಇಂಡಸ್ಟ್ರೀಸ್​ ಆಫ್​ ಇಂಡಿಯಾ (ಅಸ್ಸೋಚಾಮ್​) ಸಂಸ್ಥೆಯು 2026-27ನೇ ಸಾಲಿಗೆ ತನ್ನ ಕರ್ನಾಟಕ ರಾಜ್ಯದ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿ ಕಿಶೋರ್​ ಆಳ್ವ ಅವರನ್ನು ನೇಮಿಸಿ ಆದೇಶಿಸಿದೆ.
ಕಿಶೋರ್​ ಆಳ್ವ ಅವರು ಬಹುರಾಷ್ಟ್ರೀಯ ಕಂಪನಿ, ಇಂಧನ, ಮೂಲಸೌಕರ್ಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಸಂಬಂಧವೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮೂರು ದಶಕಗಳಿಗಿಂತ ಹೆಚ್ಚು ಅನುಭವ ಹೊಂದಿದ್ದಾರೆ. ವೃತ್ತಿ ಜೀವನದಲ್ಲಿ ಜಾಗತಿಕ ಖ್ಯಾತಿಯ ಸಂಸ್ಥೆಗಳಲ್ಲಿ ಪ್ರಮುಖ ನಾಯಕತ್ವ ಮತ್ತು ತಂತ್ರಾತ್ಮಕ ಹುದ್ದೆ ವಹಿಸಿಕೊಂಡಿದ್ದರು. ಅಲ್ಲದೆ, ವ್ಯವಹಾರ ಅಭಿವೃದ್ಧಿ, ನೀತಿ ವಕಾಲತು ಮತ್ತು ಸಂಸ್ಥಾಪನಾ ಬಲವರ್ಧನೆಗೆ ಮಹತ್ವದ ಕೊಡುಗೆ ನೀಡಿದ್ದಾರೆ.
2018-19ರಲ್ಲಿ ಬೆಂಗಳೂರು ಚೇಂಬರ್​ ಆಫ್​ ಇಂಡಸ್ಟ್ರೀಸ್​ ಆ್ಯಂಡ್​ ಕಾಮರ್ಸ್​ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ಕರ್ನಾಟಕದಲ್ಲಿ ಅದಾನಿ ಗ್ರೂಪ್​ನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1920ರಲ್ಲಿ ಸ್ಥಾಪಿತವಾದ ಅಸ್ಸೋಚಾಮ್​ 4.5 ಲಕ್ಷಕ್ಕೂ ಹೆಚ್ಚು ಕಂಪನಿ ಒಳಗೊಂಡ ಬಲಿಷ್ಠ ಸದಸ್ಯತ್ವದೊಂದಿಗೆ ಭಾರತ ದೇಶದ ಪ್ರಮುಖ ಶೃಂಗ ಮಟ್ಟದ ಉದ್ಯಮ ಸಂಸ್ಥೆಗಳಲ್ಲಿ ಒಂದಾಗಿದೆ.