ಬಿಜೆಪಿ ವಿಶೇಷ ಸಂಪರ್ಕ ಅಭಿಯಾನದಲ್ಲಿ ಹಿರಿಯ ಕಾರ್ಯಕರ್ತ ಗೋಪಾಲ ಸುವರ್ಣ ಅವರನ್ನು ಗೌರವಿಸಲಾಯಿತು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಕ್, ಚೆನ್ನಪ್ಪ ಆರ್.ಕೋಟ್ಯಾನ್, ಶಿವಪ್ರಸಾದ್ ಶೆಟ್ಟಿ, ಸುದರ್ಶನ ಬಜ ಉಪಸ್ಥಿತರಿದ್ದರು.
ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಮುಂದಿನ ದಿನಗಳು ಚುನಾವಣೆ ವರ್ಷಗಳಾಗಿದ್ದು, ಕಾರ್ಯಕರ್ತರು ಪಕ್ಷ ಸಂಟನೆಯ ಜವಾಬ್ದಾರಿಯ ಜತೆಗೆ ಗ್ರಾಮದ ಜನರ ಪ್ರತಿಯೊಂದು ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಗುಣಗಳನ್ನು ಮೈಗೂಡಿಸಿಕೊಳ್ಳಿ ಎಂದು ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಕರೆ ನೀಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸುದೀರ್ 12 ವರ್ಷಗಳ ಜನಪರ ಆಡಳಿತ, ಅಭಿವೃದ್ಧಿ ಮತ್ತು ಸೇವಾ ಸಂಕಲ್ಪದ ಅಂಗವಾಗಿ ಬಂಟ್ವಾಳ ಮಂಡಲದಲ್ಲಿ ನಡೆದ ವಿಶೇಷ ಸಂಪರ್ಕ ಅಭಿಯಾನದಲ್ಲಿ ಮಾತನಾಡಿದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ಹಿರಿಯರ ಸೂಚನೆಯಂತೆ ಶಾಸಕ ರಾಜೇಶ್ ನಾಯ್ಕ ಹಾಗೂ ಕಾರ್ಯಕರ್ತರ ಜತೆ ಹಿರಿಯ ಬಿಜೆಪಿ ಕಾರ್ಯಕರ್ತರ ಮನೆಗೆ ಭೇಟಿ ನೀಡಿ ಗೌರವಿಸುವ ಕಾರ್ಯ ವಾಡಿದ್ದೇವೆ. ಜಿಲ್ಲೆಯ ಸಂಸದನಾಗಿ ಈ ಕಾರ್ಯ ವಾಡುವುದು ನನ್ನ ಪಾಲಿನ ಸುಯೋಗ ಎಂದರು.
ವಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಿಜೆಪಿ ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್.ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ, ಸುದರ್ಶನ ಬಜ, ಬಿಜೆಪಿ ವಕ್ತಾರ ವಾಧವ ವಾವೆ, ಪಕ್ಷದ ಪ್ರಮುಖರಾದ ಸುಲೋಚನಾ ಜಿ.ಕೆ.ಭಟ್, ಹರಿಕೃಷ್ಣ ಬಂಟ್ವಾಳ, ಸಂದೇಶ್ ಶೆಟ್ಟಿ ಅರೆಬೆಟ್ಟು, ರಾಮ್‌ದಾಸ ಬಂಟ್ವಾಳ, ದೇವದಾಸ್ ಶೆಟ್ಟಿ, ದಿನೇಶ್ ಅಮ್ಟೂರು, ಪುಷ್ಪರಾಜ್ ಚೌಟ, ಅಭಿಷೇಕ್ ರೈ, ಪುರುಷೋತ್ತಮ ಶೆಟ್ಟಿ ವಾಮದಪದವು, ಯಶೋಧರ ಕರ್ಬೆಟ್ಟು, ಸಂಪತ್ ಕುವಾರ್, ದಿನೇಶ್ ಶೆಟ್ಟಿ ದಂಬೆದಾರ್, ರತ್ನಾಕರ್ ಚೌಟ,ಕಮಲಾಕ್ಷಿ ಕೆ.ಪೂಜಾರಿ, ಹರ್ಷಿಣಿ ಪುಷ್ಪಾನಂದ, ಲಖಿತಾ ಆರ್ ಶೆಟ್ಟಿ, ಸಂಜೀವ ಪೂಜಾರಿ ಪಿಲಿಂಗಾಲು, ಪ್ರಣಾಮ್ ರಾಜ್ ಮತ್ತಿತರರು ಉಪಸ್ಥಿತರಿದ್ದರು.
ಹಿರಿಯರ ಮನೆಗೆ ತೆರಳಿ ಗೌರವಾರ್ಪಣೆ
ಸಂಸದರು ಹಾಗೂ ಶಾಸಕರು ಜತೆಯಾಗಿ ಹಿರಿಯರಾದ ಗೋಪಾಲ ಸುವರ್ಣ, ಪ್ರಮೋದ್ ಕುವಾರ್ ಅಜ್ಜಿಬೆಟ್ಟು, ಶಾಂತವೀರ ಪೂಜಾರಿ, ನಾವೂರ, ದಾಮೋದರ ನಾಯಕ್ ಉಳಿ, ಬೂಬ ಸಪಲ್ಯ ಮೂಡುಪಡುಕೋಡಿ, ವಿಶ್ವನಾಥ ಗೌಡ, ರಾಯಿ, ಕರುಣೇಂದ್ರ ಪೂಜಾರಿ ಕೊಂಬ್ರರಬೈಲು, ಭಾಸ್ಕರ ಅಜೆಕಲ, ರಮೇಶ್ ಪೂಜಾರಿ, ಪ್ರಭಾಕರ ಬೋಳಂಗಡಿ, ಶಿವಾನಂದ ಬರಿವಾರು, ನಾರಾಯಣ ಗೌಡ ಏವಾಜೆ ನೆಟ್ಲಮುಡ್ನರು, ಪಿ.ಜಿ.ಕೇಶವ ಭಟ್ ಕರೋಪಾಡಿ, ಪಿ.ಲಿಂಗಪ್ಪ ಕನ್ಯಾನ ಅವರ ಮನೆಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.