ಜೆಇಇ ಮೇನ್ಸ್ 2026ರ ಮೊದಲ ಹಂತದ ಫಲಿತಾಂಶದಲ್ಲಿ ಸಾಧನೆಗೈದ ಕಾಲೇಜಿನ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಮನ್ವಿತ್ ಪ್ರಭು, ಡಾ.ಸುಧಾಕರ ಶೆಟ್ಟಿ, ವಿದ್ಯಾವತಿ ಸುಧಾಕರ್ ಶೆಟ್ಟಿ ಮೊದಲಾದವರಿದ್ದರು.
ಕಾರ್ಕಳ: ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಬದ್ಧ ನಡವಳಿಕೆ ಇಟ್ಟುಕೊಂಡವರು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧಕನಾಗಿ ಹೊರ ಹೊಮ್ಮಲು ಸಾಧ್ಯ. ಇದಕ್ಕೆ ಪೂರಕವಾದ ವಾತಾವರಣ ಜ್ಞಾನಸುಧಾದಲ್ಲಿದೆ. ಡಾ.ಸುಧಾಕರ್ ಶೆಟ್ಟಿ ವಾರ್ಗದರ್ಶನ ಹಾಗೂ ಜ್ಞಾನಸುಧಾ ಒಟ್ಟು ಕುಟುಂಬವಾಗಿ ದುಡಿಯುತ್ತಿರುವುದರ ಪ್ರತಿಫಲವೇ ಇಂತಹ ಅತ್ಯುತ್ತಮ ಫಲಿತಾಂಶಗಳಾಗಿವೆ ಎಂದು ಕಾರ್ಕಳ ಜ್ಞಾನಸುಧಾ ಕಾಲೇಜಿನ ಹಳೇ ವಿದ್ಯಾರ್ಥಿ ಇಂಜಿನಿಯರ್ ಮನ್ವಿತ್ ಪ್ರಭು ಹೇಳಿದರು.
ಕಾರ್ಕಳ ಗಣಿತನಗರ ಜ್ಞಾನಸುಧಾದ ಪ್ರಾಂಗಣದಲ್ಲಿ ಜೆಇಇ ಮೇನ್ಸ್(ಬಿ.ಟೆಕ್) 2026ರ ಮೊದಲ ಹಂತದ ಫಲಿತಾಂಶದಲ್ಲಿ ಕಾಲೇಜಿನ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ವಾತನಾಡಿದರು.
ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ವಾತನಾಡಿದರು. ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ವತಿಯಿಂದ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಜೆ.ಇ.ಇ. ಮೇನ್ಸ್(ಬಿ.ಟೆಕ್) 2026ರ ಮೊದಲ ಹಂತದ ಫಲಿತಾಂಶದಲ್ಲಿ 97ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಒಟ್ಟು 1.74 ಲಕ್ಷ ರೂ. ಪ್ರೋತ್ಸಾಹಧನ ವಿತರಿಸಲಾಯಿತು.
ಟ್ರಸ್ಟಿಗಳಾದ ವಿದ್ಯಾವತಿ ಸುಧಾಕರ್ ಶೆಟ್ಟಿ, ಅನಿಲ್ ಕುವಾರ್ ಜೈನ್, ಗಣಪತಿ ಪೈ, ಹಿತೈಷಿಗಳಾದ ದೇವೇಂದ್ರ ನಾಯಕ್, ತ್ರಿವಿಕ್ರಮ ಕಿಣಿ, ಸಿಇಒ ದಿನೇಶ್ ಎಂ.ಕೊಡವೂರ್, ಪಿಆರ್‌ಒ ಜ್ಯೋತಿ ಪದ್ಮನಾಭ ಭಂಡಿ, ಉಪಪ್ರಾಂಶುಪಾಲರಾದ ಸಾಹಿತ್ಯ ಹಾಗೂ ಉಷಾ ರಾವ್ ಯು., ಡೀನ್ ಅಕಾಡೆಮಿಕ್ಸ್ ಡಾ.ಮಿಥುನ್ ಯು., ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿ ಸಂಯೋಜಕ ಸಂದೀಪ, ಡೀನ್ ಸ್ಟೂಡೆಂಟ್ಸ್ ಅಪೈರ್ ಶಕುಂತಲಾ ಎಂ.ಸುವರ್ಣ, ಎಲ್ಲ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಆಂಗ್ಲ ಭಾಷಾ ವಿಭಾಗ ಮುಖ್ಯಸ್ಥೆ ಸಂಗೀತಾ ಕುಲಾಲ್ ನಿರೂಪಿಸಿದರು.
ಸಾಧಕರಿಗೆ ನಗದು ಪುರಸ್ಕಾರ
ಟಾಪರ್ ಆಗಿ ಹೊರಹೊಮ್ಮಿದ ಕನಿಷ್ಕ್ ಅಮೀನ್ ಅವರಿಗೆ 1 ಲಕ್ಷ ರೂ., ತುಷಾರ್ ಎ.ಶೆಟ್ಟಿಗೆ 25 ಸಾವಿರ ರೂ., ನಿಶಾನ್ ಎನ್.ಸಾಲ್ಯಾನ್ ಹಾಗೂ ತೇಜಸ್ ನಾಯಕ್‌ಗೆ ತಲಾ 15 ಸಾವಿರ ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಜತೆಗೆ 98ಕ್ಕಿಂತ ಅಧಿಕ ಪರ್ಸಂಟೈಲ್ ಪಡೆದ ಮನೋಜ್ ಎಂ., ವೈಷ್ಣವಿ ಕುಲಕರ್ಣಿ, ಸಂಜನಾ ಬಿ.ಎ., ಸಾಯಿ ರಾವೇಂದ್ರ ಬಿ., ಮಯೂರ್ ವಿ.ಗೌಡ, ವರುಣ್ ಜೆ., ಜೀವನ್ ಎನ್.ಬಿ., ದಿಗಂತ್ ಎಸ್., ಎನ್.ಎಸ್.ವಿವೇಕ್ ಅವರಿಗೆ ತಲಾ 1 ಸಾವಿರ ರೂ. ಹಾಗೂ 97ಕ್ಕಿಂತ ಅಧಿಕ ಪರ್ಸಂಟೈಲ್ ಪಡೆದ 21 ವಿದ್ಯಾರ್ಥಿಗಳಿಗೆ ತಲಾ 500 ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.