ಅಕ್ಕಿ ಕಾಳಿನಲ್ಲಿ ಬರೆದಿರುವ ಸ್ತೋತ್ರದೊಂದಿಗೆ ಮೈಕ್ರೋ ಪರಮೇಶ್.
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಉದ್ಯಮಿಯೊಬ್ಬರು ಅಕ್ಕಿ ಕಾಳಿನಲ್ಲಿ ಶ್ರೀರಾಮ ರಕ್ಷಾ ಸ್ತೋತ್ರ ಬರೆಯುವ ಮೂಲಕ ವಿಶಿಷ್ಟವಾಗಿ ಶ್ರೀರಾಮ ನವಮಿ ಆಚರಿಸಿದ್ದಾರೆ.
ಉದ್ಯಮಿ ಮೈಕ್ರೋ ಪರಮೇಶ್(ಪರಮೇಶ ಸಂಕ್ರಪ್ಪ ಬಂಡಿ) ಅಕ್ಕಿಕಾಳಿನಲ್ಲಿ ರಾಮಸ್ತೋತ್ರ ಬರೆದ ಸಾಧಕ. ಅವರು 10.30 ಗಂಟೆಯೊಳಗೆ 476 ಅಕ್ಕಿ ಕಾಳು ಬಳಸಿಕೊಂಡು ಸ್ತೋತ್ರ ಬರೆದಿದ್ದು, ಬಳಿಕ ಅದಕ್ಕೆ ಫೋಟೋ ಫ್ರೇಮ್ ಹಾಕಿ ಇಟ್ಟುಕೊಂಡಿದ್ದಾರೆ. ಅಕ್ಕಿಕಾಳಿನಲ್ಲಿ ಬರೆಯುವ ಕಲೆಯನ್ನು ಕರಗತ ಮಾಡಿಕೊಂಡಿರುವ ಇವರ ಸಾಧನೆ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್, ವಂಡರ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ರೆಕಾರ್ಡ್ಸ್ ಆಫ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡಿದೆ. ಜತೆಗೆ ಮೈಕ್ರೋ ಪರಮೇಶ್ ಅವರಿಗೆ ಹಾವೇರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕೂಡ ದೊರೆತಿದೆ.