ಸಹಕಾರ ಕ್ಷೇತ್ರದ ಸಾಧನೆ ಹಿನ್ನೆಲೆಯಲ್ಲಿ ಬಿ.ಜಯಕರ್​ ಶೆಟ್ಟಿ ಇಂದ್ರಾಳಿ ಅವರಿಗೆ ಮಂತ್ರಾಲಯದಲ್ಲಿ ನಡೆದ ಶ್ರೀ ರಾಘವೇಂದ್ರ ಗುರು ವೈಭವೋತ್ಸವ ಕಾರ್ಯಕ್ರಮದಲ್ಲಿ ಸುಭುದೇಂದ್ರ ಶ್ರೀಗಳು 'ಶ್ರೀ ಗುರು ಅನುಗ್ರಹ ಪ್ರಶಸ್ತಿ' ನೀಡಿ ಗೌರವಿಸಿದರು. ಪತ್ನಿ ಶ್ವೇತಾ ಶೆಟ್ಟಿ ಇದ್ದರು. 
ಉಡುಪಿ

ಬಿ.ಜಯಕರ್​ ಶೆಟ್ಟಿ ಇಂದ್ರಾಳಿಗೆ 'ಶ್ರೀ ಗುರು ಅನುಗ್ರಹ' ಪ್ರಶಸ್ತಿ

* ಸಹಕಾರ ಕ್ಷೇತ್ರದ ಸಾಧನೆಗೆ ಗೌರವ

* ಮಂತ್ರಾಲಯ ಶ್ರೀಗಳಿಂದ ಪ್ರದಾನ

ಉಡುಪಿ: ಸಹಕಾರ ಕ್ಷೇತ್ರದ ಸಾಧನೆ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕ ಜನಮಾನಸದಲ್ಲಿ ನೆಲೆಯಾದ ಉಡುಪಿಯ ಬಿ.ಜಯಕರ ಶೆಟ್ಟಿ ಇಂದ್ರಾಳಿ ಅವರಿಗೆ ಮಂತ್ರಾಲಯದಲ್ಲಿ ಸುಭುದೇಂದ್ರ ತೀರ್ಥ ಶ್ರೀಪಾದರು 'ಶ್ರೀ ಗುರು ಅನುಗ್ರಹ' ಪ್ರಶಸ್ತಿ ನೀಡಿ ಗೌರವಿಸಿದರು.
ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 431ನೇ ವರ್ಧಂತಿ ಉತ್ಸವದ ನಿಮಿತ್ತ ಶುಕ್ರವಾರ (ಫೆ.20) ಮಂತ್ರಾಲಯದ ಮಠದಲ್ಲಿ ಆಯೋಜಿಸಿದ್ದ ಶ್ರೀ ರಾಘವೇಂದ್ರ ಗುರು ವೈಭವೋತ್ಸವ ಕಾರ್ಯಕ್ರಮದಲ್ಲಿ ಜಯಕರ್​ ಶೆಟ್ಟಿ ಅವರನ್ನು ಪತ್ನಿ ಶ್ವೇತಾ ಶೆಟ್ಟಿ ಸಮೇತ ಸನ್ಮಾನಿಸಿ, ಆಶೀರ್ವದಿಸಿದರು.
ಶ್ರೀಗಳು ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ, ಶೈಕ್ಷಣಿಕ,  ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲೂ ಜಯಕರ್​ ಶೆಟ್ಟಿ ಛಾಪು ಮೂಡಿಸಿದ್ದಾರೆ. ಸ್ಕೌಟ್ಸ್​ ಆ್ಯಂಡ್​ ಗೈಡ್ಸ್​ನ ಉಡುಪಿ ಜಿಲ್ಲಾ ಮುಖ್ಯ ಆಯುಕ್ತರಾಗಿ, ಅನೇಕ ಸಂಘ-ಸಂಸ್ಥೆಗಳ ಸ್ಥಾಪಕರಾಗಿ, ಸಹಕಾರ ರತ್ನ ಮುಂತಾದ ಅನೇಕ ಪ್ರಶಸ್ತಿಗಳಿಗೂ ಅವರು ಭಾಜನರಾಗಿದ್ದಾರೆ. ಅನೇಕ ಧಾರ್ಮಿಕ ಸಂಸ್ಥೆಗಳ ಮೊಕ್ತೇಸರರಾಗಿಯೂ ಪ್ರಸಿದ್ಧರಾಗಿದ್ದಾರೆ. ಅವರ ಸೇವಾ ಮನೋಭಾವ, ಸತತ ಪರಿಶ್ರಮ, ಕಾರ್ಯದಕ್ಷತೆ ಮೆಚ್ಚಿ 'ಶ್ರೀ ಗುರು ಅನುಗ್ರಹ ಪ್ರಶಸ್ತಿ' ನೀಡಿ ಗೌರವಿಸಲಾಗುತ್ತಿದೆ. ಅವರ ವಿವಿಧ ಬಗೆಯ ಸಾಮಾಜಿಕ ಕಾರ್ಯ ರಾಯರ ಅನುಗ್ರಹದಿಂದ ಮುಂದುವರಿಯಲಿ ಎಂದು ಆಶಿಸಿ, ಆಶೀರ್ವದಿಸಿದರು.