ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಜನ್ಮ ಶತಮಾನೋತ್ಸವ ಸ್ಮರಣೆಯಲ್ಲಿ ಲಕ್ಷ್ಮೀನಾರಾಯಣ ಹೆಬ್ಬಾರ್, ನಾರಾಯಣ ಹೆಬ್ಬಾರ್, ಗೋಪಾಲಕೃಷ್ಣ ರಾವ್ ಅವರನ್ನು ಗೌರವಿಸಲಾಯಿತು. ಪ್ರಮುಖರಾದ ಮಂಜುನಾಥಯ್ಯ ಸಕ್ಕಟ್ಟು, ಶ್ರೀಧರ್ ಹೆಬ್ಬಾರ್, ಸೀತಾರಾಮ್ ಹೆಬ್ಬಾರ್, ಶಂಕರನಾರಾಯಣ ಹೆಬ್ಬಾರ್ ಇದ್ದರು. 
ಉಡುಪಿ

ಸಾಧನೆ, ಕಲಾ ಬದ್ಧತೆ ಪೀಳಿಗೆಗೆ ಸ್ಫೂರ್ತಿ

ಇಂದಿರಾ ಎನ್ ಕೆ
ಹೆಬ್ರಿ: ಯಕ್ಷಗಾನದಲ್ಲಿ ಬಣ್ಣದ ವೇಷದ ವೈಭವ ಮತ್ತು ಅದರ ಅನಿವಾರ್ಯತೆಯನ್ನು ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯನವರು ತಮ್ಮ ವಿಶಿಷ್ಟ ಶೈಲಿ ಮೂಲಕ ತೋರಿಸಿಕೊಟ್ಟಿದ್ದರು. ಅವರ ಸಾಧನೆ ಮತ್ತು ಕಲಾ ಬದ್ಧತೆ ಇಂದಿನ ಪೀಳಿಗೆಗೆ ಸ್ಫೂರ್ತಿ ಎಂದು ಮಂಜುನಾಥಯ್ಯ ಸಕ್ಕಟ್ಟು ಹೇಳಿದರು.
ಹೆಬ್ರಿ ‘ರಾಮಧಾಮ’ದಲ್ಲಿ ಯಕ್ಷಗಾನ ರಂಗದ ಅಪ್ರತಿಮ ಬಣ್ಣದ ವೇಷದ ಕಲಾವಿದ ಸಕ್ಕಟ್ಟು ಲಕ್ಷ್ಮೀನಾರಾಯಣಯ್ಯ ಅವರ ಜನ್ಮ ಶತಮಾನೋತ್ಸವ ಸ್ಮರಣೆ, ಸಂಭ್ರಮದಲ್ಲಿ ಇತ್ತೀಚೆಗೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಬ್ಬಿನಾಲೆ ಸ್ಥಾನಿಕ ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀಧರ್ ಹೆಬ್ಬಾರ್, ಸಂಘದ ಗೌರವಾಧ್ಯಕ್ಷ ಸೀತಾರಾಮ್ ಹೆಬ್ಬಾರ್, ರಾಮಧಾಮದ ಶಂಕರನಾರಾಯಣ ಹೆಬ್ಬಾರ್, ಕಬ್ಬಿನಾಲೆಯ ಪುರೋಹಿತ ಗುರುಪ್ರಸಾದ್ ಭಟ್ಟ ಉಪಸ್ಥಿತರಿದ್ದರು. ಯಕ್ಷಗಾನ ಮತ್ತು ಸಾಂಸ್ಕೃತಿಕ ರಂಗದ ಸಾಧಕ ಲಕ್ಷ್ಮೀನಾರಾಯಣ ಹೆಬ್ಬಾರ್, ತಾಳಮದ್ದಳೆ ಅರ್ಥಧಾರಿಗಳಾದ ನಾರಾಯಣ ಹೆಬ್ಬಾರ್, ಗೋಪಾಲಕೃಷ್ಣ ರಾವ್ ಅವರನ್ನು ಗೌರವಿಸಲಾಯಿತು.
ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬ ಅವರ ಕೃತಿ ಪಟ್ಟಾಭಿಷೇಕ-ಭರತಾಗಮನ ಪ್ರಸಂಗದ ತಾಳಮದ್ದಳೆ ಜರುಗಿತು. ಯಕ್ಷ ಕವಿ ಚಾರ ಪ್ರದೀಪ ಹೆಬ್ಬಾರ್ ಕಾರ್ಯಕ್ರಮ ಸಂಯೋಜಿಸಿದ್ದರು.