ಅದಮಾರು ಪಿಪಿಸಿಯಲ್ಲಿ ನಡೆದ ವಿಜ್ಞಾನ ಜಾಗೃತಿ ಕಾರ್ಯಕ್ರಮದಲ್ಲಿ ಡಾ.ಪಿ.ಎಸ್.ಸೀತಾರಾಮ ಭಟ್ ಮಾತನಾಡಿದರು. ಪ್ರಮುಖರಾದ ವೈ.ಎಸ್.ಸುದರ್ಶನ ರಾವ್, ಸಂಜೀವ ನಾಯ್ಕ ಇದ್ದರು.
ಪಡುಬಿದ್ರಿ: ವಿಜ್ಞಾನದ ಸಾಧನೆಗಳ ಹಿಂದೆ ಬಹಳಷ್ಟು ವಿಫಲತೆಗಳಿರುತ್ತವೆ. ಹೀಗಾಗಿ ಒಮ್ಮೆ ವಿಜ್ಞಾನ ವಿಭಾಗದಲ್ಲಿ ಸೋತ ತಕ್ಷಣ ಹಿಂದೇಟು ಹಾಕಬಾರದು. ಮುಂದೆ ಯಶಸ್ಸು ಸಿಗುತ್ತದೆ ಎಂಬ ವಿಶ್ವಾಸದಿಂದ ಇನ್ನಷ್ಟು ಕೆಲಸ ಮಾಡಬೇಕು ಎಂದು ಬೆಂಗಳೂರು ಜಯದೇವ ಹೃದ್ರೋಗ ಚಿಕಿತ್ಸಾ ಆಸ್ಪತ್ರೆ ನಿವೃತ್ತ ಪ್ರಾಧ್ಯಾಪಕ ಡಾ.ಪಿ.ಎಸ್.ಸೀತಾರಾಮ ಭಟ್ ಹೇಳಿದರು.
ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ವಿಜ್ಞಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಗೌರವ ಜತೆ ಕಾರ್ಯದರ್ಶಿ ವೈ.ಎಸ್.ಸುದರ್ಶನ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಸಂಜೀವ ನಾಯ್ಕಉಪಸ್ಥಿತರಿದ್ದರು. ಜಯಶಂಕರ ಕಂಗಣ್ಣಾರು ಅತಿಥಿಗಳನ್ನು ಪರಿಚಯಿಸಿದರು. ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಸಾನ್ವಿ ಸ್ವಾಗತಿಸಿದರು. ಸ್ತುತಿ ವಂದಿಸಿದರು. ದಿಯಾ ನಿರೂಪಿಸಿದರು.