ಬಟ್ಟೆ ವ್ಯಾಪಾರ ನಡೆಸುತಿದ್ದ ಅವರು ಕಂಚಿನಡ್ಕ ಮುಸ್ಲಿಮ್ ವೆಲ್‌ಫೇರ್ ಸದಸ್ಯರಾಗಿದ್ದರು. ಅವರು ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಪಡುಬಿದ್ರಿ: ವಿಪರೀತ ಮದ್ಯಪಾನ ಚಟ ಹೊಂದಿದ್ದ ಎಲ್ಲೂರು ಗ್ರಾಮ ಕೆಮುಂಡೇಲಿನ ಪ್ರಶಾಂತ್ ಶೆಟ್ಟಿ(46) ಎಂಬುವರು ಶನಿವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವಿವಾಹಿತರಾಗಿದ್ದ ಅವರು, ಪ್ರತಿ ದಿನ ಕುಡಿದು ಬಂದು ಒಬ್ಬಂಟಿಯಾಗಿ ಇರುತ್ತಿದ್ದರು. ಶುಕ್ರವಾರ ಮಧ್ಯಾಹ್ನ ಕುಡಿದು ಬಂದು ಕೋಣೆ ಬಾಗಿಲ ಚಿಲಕ ಹಾಕಿ ಮಲಗಿದ್ದ ಅವರನ್ನು ಶನಿವಾರ ಬೆಳಗ್ಗೆ ಮನೆಯವರು ಕರೆದರೂ ಉತ್ತರವಿರಲಿಲ್ಲ.
ಬಳಿಕ ಕೋಣೆ ಹಿಂಬದಿ ಹೋಗಿ ಕಿಟಕಿ ಮೂಲಕ ಪರಿಶೀಲಿಸಿದಾಗ ನೇಣು ಬಿಗಿದು ಮೃತಪಟ್ಟಿರುವುದು ಗೊತ್ತಾಗಿದೆ. ಪಡುಬಿದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.