abuse 
ಉಡುಪಿ

ಅವಾಚ್ಯ ಶಬ್ದಗಳಿಂದ ನಿಂದನೆ, ಹಲ್ಲೆ ಯತ್ನ

ಇಂದಿರಾ ಎನ್ ಕೆ
ಕಾರ್ಕಳ: ಸರ್ವೇಯರ್ ಗಡಿಗುರುತು ಹಾಕಿ ಹೋದ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ ವ್ಯಕ್ತಿಗಳು ಬೇಲಿ ಹಾಕಲು ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಯತ್ನಿಸಿರುವುದು ಬೋಳ ಗ್ರಾಮದಲ್ಲಿ ನಡೆದಿದೆ.
ಬೋಳದ ಶ್ರೀಅಂಶ್ ಶೆಟ್ಟಿ ಎಂಬುವರ ಹೆಸರಿನಲ್ಲಿ 0.31 ಸೆಂಟ್ಸ್ ಜಾಗವಿದ್ದು, ಶನಿವಾರ ಕಾರ್ಕಳ ತಾಲೂಕು ಸರ್ವೇಯರ್ ಬಂದು ಜಾಗಕ್ಕೆ ಗಡಿ ಗುರುತು ಮಾಡಿ ಕಲ್ಲು ಕಂಬ ಹಾಕಿ ಹೋಗಿದ್ದರು.
ಮಧ್ಯಾಹ್ನ ಗಡಿ ಗುರುತು ಮಾಡಿದ ಕಲ್ಲು ಕಂಬದ ಮಧ್ಯೆ ಕೆಲಸದವರು ಬೇಲಿ ಹಾಕುತ್ತಿದ್ದ ವೇಳೆ ನೆರೆಮನೆಯ ಕುಟ್ಟಿ ಶೆಟ್ಟಿ, ಶಾಲಿನಿ ಶೆಟ್ಟಿ, ಪೂರ್ಣಿವಾ ಶೆಟ್ಟಿ, ಜಗದೀಶ ಶೆಟ್ಟಿ ಮತ್ತು ಗೀತಾ ಶೆಟ್ಟಿ ಎಂಬುವರು ಆ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಬೇಲಿ ಹಾಕಲು ಅಡ್ಡಿಪಡಿಸಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ದೂರು ನೀಡಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.