ಪ್ರಸಾದ್ ರಬಡ 
ಉಡುಪಿ

ತಲೆಮರೆಸಿದ್ದ ಆರೋಪಿ ಭಟ್ಕಳದಲ್ಲಿ ಸೆರೆ

ಕುಂದಾಪುರ: ಆರು ತಿಂಗಳಿನಿಂದ ತಲೆಮರೆಸಿದ್ದ ಕುಂದಾಪುರ ತಾಲೂಕು ಹಟ್ಟಿಯಂಗಡಿ ಗ್ರಾಮದ ಕರ್ಕಿಗುಡ್ಡೆ ನಿವಾಸಿ ಪ್ರಸಾದ್ ರಬಡ(22) ಎಂಬಾತನನ್ನು ಕುಂದಾಪುರ ಗ್ರಾವಾಂತರ ಪೊಲೀಸರು ಭಟ್ಕಳದಲ್ಲಿ ಬಂಧಿಸಿ ಕುಂದಾಪುರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಗುರುವಾರ ಬೆಳಗ್ಗಿನ ಜಾವ ಪ್ರಸಾದ್ ರಬಡ ಭಟ್ಕಳದಲ್ಲಿರುವ ಬಗ್ಗೆ ದೊರಕಿದ ಖಚಿತ ವಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕುಂದಾಪುರ ಗ್ರಾವಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಾರಂಟ್ ಆರೋಪಿಯಾಗಿದ್ದ ಈತನ ಮೇಲೆ ಕುಂದಾಪುರ ಗ್ರಾವಾಂತರ ಪೊಲೀಸ್ ಠಾಣೆಯಲ್ಲಿ 4, ಕುಂದಾಪುರ ನಗರ ಠಾಣೆಯಲ್ಲಿ 2 ಮತ್ತು ಮಣಿಪಾಲ ಪೊಲೀಸ್ ಠಾಣೆಯಲ್ಲಿ 1ರಂತೆ ಕೊಲೆ ಯತ್ನ, ಕಳ್ಳತನ, ಎನ್‌ಡಿಪಿಎಸ್‌ನಂತಹ ಒಟ್ಟು 7 ಪ್ರಕರಣಗಳು ದಾಖಲಾಗಿತ್ತು. ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಈತನ ವಿರುದ್ಧ ವಾರಂಟ್ ಹೊರಡಿಸಿತ್ತು.