ಶಾಸಕ ಯಶ್ ಪಾಲ್ ಸುವರ್ಣ ನೇತ್ರತ್ವದಲ್ಲಿ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರಿಗೆ ಸೀಯಾಳ ಅಭಿಷೇಕ ಸೋಮವಾರ ನೆರವೇರಿತು. 
ಉಡುಪಿ

ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೀಯಾಳ ಅಭಿಷೇಕ

ಉಡುಪಿ: ನಗರ ಬಿಜೆಪಿ ವತಿಯಿಂದ ನಾಡಿನಾದ್ಯಂತ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಲೋಕಕಲ್ಯಾಣದ ಸಂಕಲ್ಪದೊಂದಿಗೆ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರಿಗೆ ಸೀಯಾಳ ಅಭಿಷೇಕ ಸೋಮವಾರ ನೆರವೇರಿತು.
ಈ ಸಂದರ್ಭದಲ್ಲಿ ಶಾಸಕ ಯಶ್ ಪಾಲ್ ಸುವರ್ಣ, ನಗರ ಬಿಜೆಪಿ ಅಧ್ಯಕ್ಷ ದಿನೇಶ್​ ಅಮೀನ್​, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಸದಸ್ಯರಾದ ಅಶೋಕ್​ ನಾಯ್ಕ್​, ಸವಿತಾ ಹರೀಶ್​ ರಾಮ್​, ರಶ್ಮಿ ಸಿ. ಭಟ್​, ಅನಿಟ ಡಿಸೋಜ, ಟಿ. ಜಿ. ಹೆಗ್ಡೆ, ಮಂಡಲದ ಪ್ರಧಾನ ಕಾರ್ಯದರ್ಶಿ ಜಗದೀಶ್​ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಪಕ್ಷದ ಪ್ರಮುಖರಾದ ಡೆನಿಸ್​ ಮಸ್ಕರೇನ್ಹಸ್​, ಕಿಶೋರ್​ ಕುಮಾರ್​, ಆನಂದ ಮಠದಬೆಟ್ಟು, ಶಂಕರ ಕುಲಾಲ್​, ನೀತಾ ಪ್ರಭು, ಶ್ರೀವತ್ಸ, ಅರುಣ್​ ಮಲ್ಪೆ, ಹಿಂದೂ ಯುವ ಸೇನೆಯ ಜಿಲ್ಲಾಧ್ಯಕ್ಷ ಅಜಿತ್​ ಕೊಡವೂರು, ಗುರುರಾಜ್​ ಭಂಡಾರಿ, ಗೋಪಾಲ ಪೂಜಾರಿ, ಸಂತೋಷ್​ ಆಚಾರ್ಯ, ನಿತ್ಯಾನಂದ ಕಾಮತ್​, ಸುರೇಶ್​ ಆಚಾರ್ಯ, ವಿರಾಜ್​, ಭೂಷಣ್​, ನಿಖಿಲ್​ ಮಡಿವಾಳ, ಸುಜಲ ಸುವರ್ಣ, ದೀಪಾ ಪೈ, ಸುಲತಾ, ಸುಗುಣ ನಾಯ್ಕ್​, ಸುಜಾತ ಶೆಟ್ಟಿ, ಪ್ರಜ್ಞ ಶೆಟ್ಟಿ, ಪೂರ್ಣಿಮ ಶೆಟ್ಟಿ ಉಪಸ್ಥಿತರಿದ್ದರು.
"

ಕರಾವಳಿ ಜಿಲ್ಲೆ ಸಹಿತ ರಾಜ್ಯದಾದ್ಯಂತ ವಾಡಿಕೆಗಿಂತ ಮಳೆ ಪ್ರಮಾಣ ಕಡಿಮೆಯಾದ ಹಿನ್ನಲೆಯಲ್ಲಿ ಬನ್ನಂಜೆ ಮಹಾಲಿಂಗೇಶ್ವರ ದೇವರಿಗೆ ಸೀಯಾಳ ಅಭಿಫಿೇಕ ನಡೆಸುವ ಸಂಕಲ್ಪ ಮಾಡಿದ್ದು, ಇಂದು ಬೆಳಿಗ್ಗೆಯಿಂದಲೇ ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು ಸಂತಸ ತಂದಿದೆ.

— ಯಶ್ ಪಾಲ್​ ಸುವರ್ಣ, ಶಾಸಕ