ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಆಯೋಜಿಸಿದ್ದ 'ಆಟಿಯ ಲೇಸು' ಕಾರ್ಯಕ್ರಮವನ್ನು ನ್ಯಾಯಾಧೀಶ ಕಿರಣ್ ಗಂಗಣ್ಣನವರ್ ಉದ್ಘಾಟಿಸಿದರು. ಮಟ್ಟಾರ್ ರತ್ನಾಕರ್ ಹೆಗ್ಡೆ, ದೇವದಾಸ್ ವಿ. ಶೆಟ್ಟಿಗಾರ್, ಚಂದ್ರಶೇಖರ್ ಶೆಟ್ಟಿ, ಪಿ.ಜಯಚಂದ್ರ ಶೆಟ್ಟಿ, ವಾಣಿ ವಿ. ರಾವ್, ಜಯಪ್ರಕಾಶ್ ಕೆದ್ಲಾಯ ಇದ್ದರು.
* ಜಿಲ್ಲಾ ನ್ಯಾಯಾಧೀಶ ಕಿರಣ್ ಗಂಗಣ್ಣನವರ್ ಶ್ಲಾಘನೆ
* ಕೋರ್ಟ್ನಲ್ಲಿ 'ಆಟಿಯ ಲೇಸು' ಕಾರ್ಯಕ್ರಮ
ಉಡುಪಿ: ತುಳುನಾಡಿನ ಕುರಿತಾಗಿ ಪುಸ್ತಕದಲ್ಲಿ ಓದಿ ಇಲ್ಲಿನ ಸಂಸ್ಕೃತಿ, ಆಚರಣೆಗಳ ಬಗ್ಗೆ ತಿಳಿದಿದ್ದೆವು. ಆದರೆ, ಈಗ ಅದನ್ನು ಕಣ್ತುಂಬಿಕೊಂಡು, ಸವಿಯುವ ಅವಕಾಶವೂ ಒದಗಿದೆ. ಇಲ್ಲಿನ ಜನರ ಆಚಾರ-ವಿಚಾರ ತಿಳಿಯಲು 'ಆಟಿಯ ಲೇಸು' ಕಾರ್ಯಕ್ರಮ ಅತ್ಯಂತ ಸೊಬಗಿನಿಂದ ಕೂಡಿದೆ ಎಂದು ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್ ಹೇಳಿದರು.
ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರ ಸಂಘ ಶುಕ್ರವಾರ (ಆ.14) ಆಯೋಜಿಸಿದ್ದ 'ಆಟಿದ ಲೇಸು ಮತ್ತು ಸನ್ಮಾನ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಡುಪಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ಮಾತನಾಡಿ, ಪ್ರಥಮ ಬಾರಿಗೆ ಕೋರ್ಟ್ನಲ್ಲೂ "ಆಟಿಯ ಲೇಸು" ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ ಎಂದರು.
ವಕೀಲರ ಸಂಘದ ಉಪಾಧ್ಯಕ್ಷ ದೇವದಾಸ್ ವಿ. ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ, ಕುಂದಾಪುರ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಜಯಚಂದ್ರ ಶೆಟ್ಟಿ, ಹಿರಿಯ ವಕೀಲೆ ವಾಣಿ ವಿ. ರಾವ್, ಉಡುಪಿ ಅಡ್ವೋಕೇಟ್ಸ್ ವೆಲ್ಫೇರ್ ಸ್ಪೋರ್ಟ್ಸ್ ಆ್ಯಂಡ್ ಕಲ್ಚರಲ್ ಕ್ಲಬ್ನ ಅಧ್ಯಕ್ಷ ಜಯಪ್ರಕಾಶ್ ಕೆದ್ಲಾಯ ಉಪಸ್ಥಿತರಿದ್ದರು.
ವಕೀಲೆ ರೂಪಾ ಪ್ರಾರ್ಥಿಸಿದರು. ವಕೀಲ ಸುದರ್ಷ ರಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲೆ ಐಶ್ವರ್ಯಾ ಕಾರ್ಯಕ್ರಮ ನಿರೂಪಿಸಿದರು.
ಸನ್ಮಾನ ಸ್ವೀಕರಿಸಿದ ರಾಜ್ಯ ವಕೀಲರ ಪರಿಷತ್ ಸದಸ್ಯ ಪದ್ಮಪ್ರಸಾದ್ ಹೆಗ್ಡೆ ಮಾತನಾಡಿ, ಉಡುಪಿ ವಕೀಲರ ಸಂಘವು ಈ ನೆಲದ ಸಂಸ್ಕೃತಿಯನ್ನು ಯುವ ವಕೀಲರಿಗೂ ತಿಳಿಸುವ ಕಾರ್ಯ ಮಾಡಿದ್ದು, ಇದೊಂದು ಮಾದರಿ ಕಾರ್ಯಕ್ರಮವಾಗಿದೆ ಎಂದರು. ಸನ್ಮಾನ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಸೀನಿಯರ್ ಕೌನ್ಸಿಲ್ ವೈ.ಟಿ ರಾಘವೇಂದ್ರ ಸ್ವಾಗತಿಸಿದರು. ವಕೀಲ ಅಖಿಲ್ ಬಿ. ಹೆಗ್ಡೆ ನಿರೂಪಿಸಿದರು. ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಶ್ರೀನಾಥ್ ರಾವ್ ಉಪಸ್ಥಿತರಿದ್ದರು.