ರಾಜವರ್ಮ ಜೈನ್ 
ಉಡುಪಿ

ಅಪಘಾತದಲ್ಲಿ ಸಾಣೂರಿನ ಯುವಕ ಮೃತ್ಯು

ಕಾರ್ಕಳ: ಮಸ್ಕತ್‌ನ ಒಮಾನ್‌ನಲ್ಲಿ ಸೋಮವಾರ ನಡೆದ ಅಪಘಾತದಲ್ಲಿ ಸಾಣೂರಿನ ಮೂಲಬೆಟ್ಟು ಗುತ್ತಿನ ಮನೆಯ ರಾಜವರ್ಮ ಜೈನ್(33) ಮೃತಪಟ್ಟಿದ್ದಾರೆ. ಅವರು ಒಮಾನ್‌ನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದರು.
ಸೋಮವಾರ ಕಂಪನಿಯ ವಾಹನ ರಿವರ್ಸ್ ತೆಗೆಯುವಾಗ ಅದರಡಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ತಂದೆ, ತಾಯಿ, ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.